ವಿಜಯ ಸಂಘರ್ಷ
ಭದ್ರಾವತಿ: ನಗರದ ಸೈಲ್-ವಿಐಎಸ್ಎಲ್ ಆಸ್ಪತ್ರೆ ವತಿಯಿಂದ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಹಾಗು ಮೈದೊಳಲು ಗ್ರಾ ಪಂ ಸಹಯೋಗದೊಂದಿಗೆ ಅ.19 ರ ನಾಳೆ ತಾಲೂಕಿನ ಮೈದೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯವೇ ಭಾಗ್ಯ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಹಮ್ಮಿಕೊಳ್ಳಲಾಗಿದೆ.
ತಜ್ಞ ವೈದ್ಯರಿಂದ ಮೂಳೆ, ನರ, ಹೃದಯ, 3ಡಿ ಎಕೋ,ಇಸಿಜಿ, ಕಣ್ಣು, ಹಲ್ಲು, ಬಿ.ಪಿ, ಮಧುಮೇಹ(ಸಕ್ಕರೆ ಕಾಯಿಲೆ) ಕಾಯಿಲೆಗಳ ಉಚಿತ ತಪಾಸಣೆ ಹಾಗು ಔಷಧಿ ವಿತರಣೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದೆ. ಮೈದೊಳಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರ ಸದುಪಯೋಗ ಪಡೆದುಕೊಳ್ಳುವಂತೆ ವಿಐಎಸ್ಎಲ್ ಆಡಳಿತ ಮಂಡಳಿ ಕೋರಿದೆ.