ವಿಜಯ ಸಂಘರ್ಷ
ಭದ್ರಾವತಿ: ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಲು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹಿಸ ಬೇಕೆಂದು ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕೃಷ್ಣೇಗೌಡ ಕರೆ ನೀಡಿದರು.
ಹಳೇನಗರದ ಕನಕಮಂಟಪ ಮೈದಾನ ದಲ್ಲಿ ನಗರಸಭೆಯಿಂದ ಆಯೋಜಿಸ ಲಾಗಿದ್ದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಆರಂಭಿಕ ಪಂದ್ಯಾವಳಿಯಾಗಿ ನಗರಸಭೆ ಪೌರಕಾರ್ಮಿಕರು ಹಾಗು ನಗರಸಭೆ ಸಿಬ್ಬಂದಿ ಸೌಹಾರ್ಧ ಪಂದ್ಯಾವಳಿ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
Tags
ನಗರಸಭೆ ದಸರಾ ಸುದ್ದಿ