ಕಲಾವಿದನ ಕೈಯಲ್ಲಿ ಪೆನ್ಸಿಲ್ ನಲ್ಲಿ ಮೂಡಿದ ತಾಯಿ ಚಾಮುಂಡೇಶ್ವರಿ

ವಿಜಯ ಸಂಘರ್ಷ
ಭದ್ರಾವತಿ: ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಯಶಸ್ಸು ಕಾಣಬಹುದು ಎಂಬುದನ್ನು ಸಾಬೀತು ಪಡಿಸಿದ ಸಾಧಕ ನಗರದ ಸೂಕ್ಷ್ಮ ಕೆತ್ತನೆ ಕಲಾಕೃತಿಗಳ ಕಲಾವಿದ, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಎಸ್. ವರುಣ್ ಕುಮಾರ್ ಈ ಭಾರಿ ದಸರಾ ವಿಶೇಷವಾಗಿ ಪೆನ್ಸಿಲ್ ನಲ್ಲಿ ತಾಯಿ ಚಾಮುಂಡೇಶ್ವರಿ ತಾಯಿ ಕಲಾಕೃತಿಯನ್ನು ರೂಪಿಸಿದ್ದಾರೆ.

ತಾಯಿಯ ಆಕರ್ಷಕವಾಗಿ ಕಂಡು ಬರುತ್ತಿದೆ. ಪ್ರತಿಯೊಂದು ಹಬ್ಬಹರಿದಿನ ಗಳಲ್ಲಿ ವಿಶೇಷ ಕಲಾಕೃತಿಗಳನ್ನು ರೂಪಿಸುತ್ತಿದ್ದು, ಸೀಮೆಸುಣ್ಣ, ಅಕ್ಕಿಕಾಳು, ಗೋಬಿಕಡ್ಡಿ, ಶೇಂಗಾಬೀಜ, ಮದುವೆ ಆಮಂತ್ರಣ ಪತ್ರ ಸೇರಿದಂತೆ ಹಲವು ಕೃತಿಗಳಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ, ಅಟಲ್ ಬಿಹಾರಿ ವಾಜಪೇಯಿ, ಚಲನಚಿತ್ರ ನಟಿ ಶ್ರೀದೇವಿ ಇವರ ಹಲವು ಮಾದರಿ ಕಲಾಕೃತಿಗಳು ಗಮನ ಸೆಳೆದಿವೆ. ಅಲ್ಲದೆ ಪೆನ್ಸಿಲ್ ಮದ್ದಿನಲ್ಲಿ ವರಮಹಾಲಕ್ಷ್ಮಿ, ಆಂಗ್ಲಭಾಷೆಯ ವರ್ಣಮಾಲೆ, ಮೆಕ್ಕಾ ಮದೀನಾ ರಚಿಸಿ ಮನೆಗಳಲ್ಲಿ ಶೋ ಕೇಸ್ ನಲ್ಲೂ ಇರಿಸಬಹುದಾದ ಅನೇಕ ಕಲಾಕೃತಿ ರಚಿಸಿದ್ದಾರೆ. ಅಲ್ಲದೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿವೆ.

1 ಕಾಮೆಂಟ್‌ಗಳು

  1. ಕಲಾವಿದ ವರುಣ್ ರವರಿಗೆ ಶುಭಾಶಯಗಳು. ನೀವು ಅಪರೂಪದ ಕಲಾವಿದರು .
    ನಿಮ್ಮನ್ನು ಪರಿಚಯಿಸಿದ ಗೆಳೆಯ ಕೃಷ್ಣಾ ರವರಿಗೂ ಧನ್ಯವಾದಗಳು .
    Jnb 🙋‍♂️

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು