ಖೋ ಖೋ ದಲ್ಲಿ ಇತಿಹಾಸ ಸೃಷ್ಟಿಸಿದ ದೇವರಹಳ್ಳಿ ಹುಡುಗರು

ವಿಜಯ ಸಂಘರ್ಷ
ಚನ್ನಗಿರಿ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು
ಖೋ ಖೋ ದಲ್ಲಿ ವಿಭಾಗ ಮಟ್ಟದಲ್ಲಿ ಸೆಮಿಪೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.

ಮುಖ್ಯ ಶಿಕ್ಷಕರು ಹಾಗೂ ತಂಡದ ತರಬೇತುದಾರರಾದ ರಂಗಸ್ವಾಮಿ ಡಿ. ಜಿ. ಯವರ ಪರಿಶ್ರಮದಿಂದ ಈ ಸ್ಥಾನ ತಲುಪಿದ್ದಾರೆ.

ದೇವರಹಳ್ಳಿ ಮೊದಲಿನಿಂದಲೂ ಖೋ ಖೋ ಆಟಕ್ಕೆ ಹೆಸರುವಾಸಿ. ಇಲ್ಲಿನ ಯುವಕರು ಸದಾ ಸ್ಪರ್ಧಾಪ್ರಿಯರು. ಮಿಂಚಿನ ಓಟದ ಆಟಗಾರರು ರಾಜ್ಯಮಟ್ಟದಲ್ಲೂ ಹೆಸರು ಮಾಡಿರುವುದು ಇಲ್ಲಿನ ಹೆಗ್ಗಳಿಕೆ. ಖೋ ಖೋ ತಂಡದಲ್ಲಿ, ಮನೋಜ್. ಕೆ.ಟಿ, ಉಡುಗಿರಿ ಎಂ. ಎನ್.,ಶ್ರೇಯಸ್ ಕೆ, ಮನೋಜ್ ಎಂ., ಕೋಟೇಶ ಕೆ. ಪಿ., ವರುಣ ಎನ್, ತರುಣ್ ಕಾಂತ ಕೆ. ಸಿ., ಹೇಮಂತ್ ಆರ್, ನೀಲೇಶ ಎಂ. ಎನ್., ಯಶ್ವಂತ ಎ.ಎನ್, ಹೇಮಂತ್ ಎನ್. ಕಿರಣ್ ಕುಮಾರ್ ಎನ್. ವಿ., ಕಿಶೋರ್ ಸಿ, ಯಶ್ವಂತ ಎಂ. ಎಂ. ಇವರನ್ನು ಗ್ರಾಮದ ಜನರು ಆತ್ಮೀಯವಾಗಿ ಅಭಿನಂದಿಸಿದರು.

ಗುರುಕುಲ ಶಾಲೆಯ ಎಲ್ಲಾ ಶಿಕ್ಷಕವರ್ಗಕ್ಕೂ ಹಾಗೂ ಮಕ್ಕಳಿಗೆ ಸಮವಸ್ತ್ರ ನೀಡಿ ಅಭಿನಂದಿಸಿದ ದಾನಿಗಳು ಶುಭಕೋರಿದರು. 

(ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು).

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು