ವಿಜಯ ಸಂಘರ್ಷ
ಸಾಗರ: ಕನ್ನಡವನ್ನು ಶುದ್ಧವಾಗಿ ಬರೆಯುವ, ಮಾತನಾಡುವ ಕೌಶಲ್ಯ ವನ್ನು ಬೆಳೆಸಿಕೊಂಡು ಪಾಲಿಸುವುದೇ ಕನ್ನಡಕ್ಕೆ ಮಾಡುವ ಮಹತ್ತರ ಸೇವೆಯಾಗಿದೆ. ಕನ್ನಡಿಗರಲ್ಲದವರು ಕನ್ನಡಕ್ಕೆ ಕೊಟ್ಟಿರುವ ಕೊಡುಗೆ ಅವರ ಕನ್ನಡಾಭಿಮಾನ ಅನುಕರಣೀಯ ವಾದುದು,ಕನ್ನಡಿಗರಾದ ನಾವುಗಳು ನಮ್ಮ ಭಾಷೆ ಬಗ್ಗೆ ಅಭಿಮಾನ ಶೂನ್ಯರಾಗಬಾರದು ಎಂದು ಆನಂದಪುರ ಜಿ ಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ ಅಭಿಪ್ರಾಯಪಟ್ಟರು.
ಅವರು ಆನಂದಪುರ ಕನ್ನಡ ಸಂಘ ದಲ್ಲಿ ಆಯೋಜಿಸಲಾಗಿದ್ದ ತಾಯಿ ಭುವನೇಶ್ವರಿ ದೇವಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕನ್ನಡಿಗರಾದ ನಾವು ನಮ್ಮ ಮನೆಗಳಲ್ಲಿ ಮತ್ತು ಸಮಾಜದಲ್ಲಿ ಮಾಡುವಂತಹ ವ್ಯವಹಾರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ನಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ಮತ್ತದರ ಸೌಂದರ್ಯವನ್ನು ಸದಾ ಬಣ್ಣಿಸುತ್ತಿರಬೇಕು. ಕನ್ನಡ ಹೃದಯದ ಭಾಷೆಯಾಗಿದೆ ಎಂದರು.
ಪೋಷಕರು ಕನ್ನಡ ಭಾಷೆಯನ್ನು ಪ್ರೀತಿಸಿ, ಬಳಸಿದರೆ ಮಕ್ಕಳು ಸಹಜವಾಗಿಯೇ ಪಾಲಕರನ್ನು ಅನುಕರಿಸುತ್ತಾರೆ ನಿನ್ನ ನೋವಿಗೆ ಸ್ಪಂದಿಸುವ ಕನ್ನಡವೇ ನಿನ್ನ ಭಾಷೆಯಾಗಿದೆ. ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಇರುವ ನಾಡು ನಮ್ಮದಾಗಿದೆ. ಎಲ್ಲಿಂದಲೋ ಬಂದವರು ಕನ್ನಡವನ್ನು ಕಲಿತು ಸ್ಪಷ್ಟವಾಗಿ ಮಾತನಾಡುತ್ತಿರುವುದು ಒಂದೆಡೆಯಾದರೆ ಇತ್ತ ಕರ್ನಾಟಕ ದವರೇ ಕನ್ನಡ ಮಾತನಾಡುವುದೇ ಅಪಮಾನಕರ ಎಂದು ಭಾವಿಸುವವರೂ ಇರುವುದು ದುರಾದೃಷ್ಟ ಕರವಾದುದು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಭಾಷಾಭಿಮಾನದ ಕೊರತೆ ಇದೆ ಇದನ್ನು ಸರಿಪಡಿಸಿಕೊಳ್ಳ ಬೇಕಾದುದು ನಮ್ಮೆಲ್ಲರ ಪ್ರಧಾನ ಕರ್ತವ್ಯವಾಗಿದೆ ಎಂದರು.
ಕನ್ನಡ ಸಂಘದಿoದ ಯಡೇಹಳ್ಳಿ ವೃತ್ತದವರೆಗೆ ತಾಯಿ ಭುವನೇಶ್ವರಿಯ ರಾಜಬೀದಿ ಉತ್ಸವ ಸಾಗಿತು ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿ ಗಳು ಕನ್ನಡ ಪರ ಘೋಷಣೆ ಕೂಗುತ್ತಾ, ಡ್ರಮ್ ಸೆಟ್ ಮೆರವಣಿಗೆಗೆ ಮೆರಗು ತಂದರು.
ಈ ಸಂದರ್ಭದಲ್ಲಿ ಕನ್ನಡ ಸಂಘದ ಗೌರವಾಧ್ಯಕ್ಷ ರಾಜೇಂದ್ರ ಗೌಡ, ಅಧ್ಯಕ್ಷ ಜಫರುಲ್ಲಾಮಾಫಿರ್, ಕಾರ್ಯದರ್ಶಿ ಮಧುಕರ್ ನಾಯಕ್, ಸದಸ್ಯರಾದ ಜಗನ್ನಾಥ್, ಸುರೇಶ್ ನಾಯ್ಕ್ , ಉಮೇಶ್, ಶ್ರೀನಿವಾಸ್, ಶ್ರೀಕಾಂತ್ ಜೋಷಿ, ಕೆ.ಪಿ.ಎಸ್. ಪ್ರಾಂಶುಪಾಲ ರವಿಶಂಕರ್, ಉಪಪ್ರಾಂಶುಪಾಲ ಈಶ್ವರಪ್ಪ, ಗ್ರಾ.ಪಂ. ಅಧ್ಯಕ್ಷ ಪರಮೇಶ್‌ಇನ್ನಿತರರು ಹಾಜರಿದ್ದರು.
“ ನಮ್ಮ ಕನ್ನಡ ಭಾಷೆಯನ್ನು ಪರರಿಗೆ ಕಲಿಸುವ ಕೆಲಸ ನಾವು ಮಾಡಬೇಕು. ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು ಆದರೆ ಅದರ ಭರಾಟೆಯಲ್ಲಿ ಕನ್ನಡವನ್ನು ಅಲಕ್ಷಿಸಬಾರದು. ತಮ್ಮ ಮಕ್ಕಳ ಬಾಯಿಂದ ಅಪ್ಪ-ಅಮ್ಮ ಎಂದು ಕರೆಸಿಕೊಳ್ಳುವುದು ಕೀಳರಿಮೆಯಲ್ಲ ಎಂಬುದು ಅರ್ಥೈಸಿಕೊಳ್ಳಬೇಕು. ಸಮೃದ್ಧವಾದ ಸಂಸ್ಕೃತಿಯ ಕನ್ನಡ ನಾಡು-ನುಡಿ ಇಲ್ಲಿನ ಪರಿಸರವನ್ನು ಪ್ರೀತಿಸಿ ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ."
(ಜಫರುಲ್ಲಾ ಮಾಪೀರ್, ಅಧ್ಯಕ್ಷರು, ಕನ್ನಡ ಸಂಘ)
Tags:
ಆನಂದಪುರ ರಾಜ್ಯೋತ್ಸವ