ಈ ನಾಡು ಕಂಡ ಅತ್ಯಂತ ಶ್ರೇಷ್ಠಯುಗದ ಕವಿ ಕುವೆಂಪು: ಎಂ ಚಂದ್ರಶೇಖರಯ್ಯ

ವಿಜಯ ಸಂಘರ್ಷ
ಶಿವಮೊಗ್ಗ: ಕುವೆಂಪು ಅವರ ಸಾಹಿತ್ಯ ಕೃಷಿ ಹಾಗೂ ಅವರ ತತ್ವ ಆದರ್ಶ ಗುಣಗಳು, ಅವರ ಬರವಣಿಗೆ ವಿಮರ್ಶೆ ಇಂದಿಗೂ ಪ್ರಸ್ತುತ, ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಕುವೆಂಪುರವರು ರಸಋಷಿ, ಜಗದ ಕವಿ, ಯುಗದ ಕವಿ ಆಗಿದ್ದಾರೆ ಎಂದು ನಿವೃತ್ತ ಡಿ.ಪಿ.ಐ. ಚಂದ್ರಶೇಖರಯ್ಯ ಅಭಿಪ್ರಾಯ ಪಟ್ಟರು.

 ಇಂದು ರೋಟರಿ ಪೂರ್ವದ ವತಿಯಿಂದ ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕುವೆಂಪು ಜನ್ಮದಿನದ ಆಚರಣೆ ಸಂಭ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ಅವರು ಧೈತ್ಯ ಪ್ರತಿಭೆ ಹಾಗೂ ವಿಶ್ವ ಮಾನವ ಅವರ ರಚನೆಗಳು ಇಂದಿಗೂ ಪ್ರಸ್ತುತ ಹಾಗೂ ದಾರಿ ದೀಪವಾಗಿದೆ. ಸಮಾಜದ ಒರೆಕೊರೆಗಳನ್ನು ತಿದ್ದುವಲ್ಲಿ ಕುವೆಂಪುರವರ ಸಮಗ್ರ ಸಾಹಿತ್ಯ ಮಹತ್ವ ವಾದ ಪಾತ್ರ ವಹಿಸಿದೆ. ಕುವೆಂಪುರವರು ರಚಿಸಿದ ರಾಮಾಯಣ ದರ್ಶನಂ, ಬೆರಳಿಗೆ ಕೊರಳ್, ಜಲಗಾರ, ರಕ್ತಾಕ್ಷಿ, ಕಾವ್ಯ, ಕವಿತೆ, ನಾಟಕಗಳು ಜನರ ಕಣ್ಣನ್ನು ತೆರೆಸಿವೆ. ಇಂತಹ ಶ್ರೇಷ್ಠ ಕವಿ ನಮ್ಮ ಜಿಲ್ಲೆಯಲ್ಲಿ ಜನಿಸಿರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆ.ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿ ಕೊಳ್ಳಬೇಕು ಮತ್ತು ಅವರು ಆಚರಣೆಗೆ ತಂದಿರುವ ಮಂತ್ರ ಮಾಂಗಲ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ನುಡಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್‌ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪುರವರು ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗದೆ, ನಮ್ಮ ರಾಷ್ಟದಲ್ಲೂ ಹೆಸರು ತಂದುಕೊಟ್ಟ ಪ್ರಥಮ ರಾಷ್ಟಕವಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಿಟ್ಟಿನಲ್ಲಿ ನಾವು ನಮ್ಮ ಮುಂದಿನ ಪೀಳಿಗೆಗೆ ಅವರ ನಡೆನುಡಿಗಳ ಸಾಧನೆಗೆ ಪರಿಚಯಿಸ ಬೇಕಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಎಲ್ಲ ರೋಟರಿ ಬಂಧುಗಳು ಪುಷ್ಪ ನಮನವನ್ನು ಸಲ್ಲಿಸಿ ಕುವೆಂಪು ಗೀತೆಗಳನ್ನು ಹಾಡಿದರು.

ವೇದಿಕೆಯಲ್ಲಿ ಸಹಾಯಕ ಮಾಜಿ ಗವರ್ನರ್ ಜಿ. ವಿಜಯ್ ಕುಮಾರ್, ವಸಂತ್ ಹೋಬಳಿದಾರ್, ಶ್ರೀಕಾಂತ್ ಎನ್.ಹೆಚ್., ಅರುಣ್ ದೀಕ್ಷಿತ್, ಮಂಜುನಾಥ್ ಕದಂ, ಕಿಶೋರ್ ಕುಮಾರ್ ಡಿ., ಸುಮತಿ ಜಿ. ಕುಮಾರಸ್ವಾಮಿ, ಶಶಿಕಾಂತ್ ನಾಡಿಗ್, ಎ.ಟಿ. ಸುಬ್ಬೇಗೌಡ, ಸಿ.ಕೆ. ವಿಜಯ್ ಕುಮಾರ್, ಗಣೇಶ್ ಎಸ್., ದಿವ್ಯ ಪ್ರವೀಣ್, ಶೇಷಗಿರಿ, ಮಾದೇವಸ್ವಾಮಿ ಹಾಗೂ ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು