ವಿಜಯ ಸಂಘರ್ಷ
ಭದ್ರಾವತಿ: ನಾನು ರಾಮಭಕ್ತ ನನ್ನನ್ನ ಬಂಧಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ನಗರದ ಡಿವೈಎಸ್ಪಿ ಕಚೇರಿಯ ಮುಂದೆ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದೆ.
ಬುಧವಾರ ಸಂಜೆ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ದೇವರಾಜ್ ಅರಳಿಹಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ. ಮಾತನಾಡಿದ ಅವರು,30 ವರ್ಷದ ಹಿಂದೆ ಕರಸೇವಕರ ಕೇಸ್ ರೀ ಒಪನ್ ಮಾಡಲಾಗಿದೆ.
13 ಜನ ಕರಸೇವಕರ ಹೆಸರನ್ನ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಇದರಲ್ಲಿ 5 ಜನರ ವಿರುದ್ಧ ಪ್ರಕರಣ ಖುಲಾಸೆಯಾಗಿದೆ. 5 ಜನರು ಮರಣ ಹೊಂದಿದ್ದಾರೆ. ಶ್ರೀಕಾಂತ್ ಪೂಜಾರಿ, ರಾಜು ಧರ್ಮದಾಸ್ ಇವರಿಗೆ 75 ವರ್ಷಗಳು ಅಗಿವೆ. ಇವರನ್ನ ಬಂಧಿಸಲಾಗಿದೆ. ಇದು ರಾಮ ವಿರೋಧಿ ಹಾಗೂ ಹಿಂದೂ ವಿರೋಧಿ ಸರ್ಕಾರ ಎಂದು ದೂರಿದರು.
ಮನೆ ಮನೆಯಯಲ್ಲೂ ರಾಮ ಭಕ್ತರಿದ್ದಾರೆ. ಇವರನ್ನೆಲ್ಲಾ ಬಂಧಿಸಬೇಕೆಂಬ ಆಲೋಚನೆ ಸರ್ಕಾರದಲ್ಲಿದ್ದರೆ ಬಂಧಿಸಿ ಅದಕ್ಕಾಗಿ ಹೊಸ ಬಂಧಿಖಾನೆ ನಿರ್ಮಿಸಿ ಅದನ್ನೂ ರಾಮಮಯ ಮಾಡುವ ಶಕ್ತಿ ಈ ರಾಮಭಕ್ತರಿಗೆ ಇದೆ ಎಂದು ಗುಡುಗಿದರು.
ರಾಮ ಭಕ್ತರನ್ನ ಬೆದರಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಪೊಲೀಸರ ಮೂಲಕ ರಾಮಭಕ್ತರನ್ನ ಹೆದರಿಸಲಾಗುತ್ತಿದೆ. ಪಕ್ಷದ ಮುಖಂಡ ಹರಿಪ್ರಸಾದ್ ಕರ್ನಾಟಕ ಗೋದ್ರಾ ಆಗುವ ಶಂಕೆಯನ್ನ ಹೊರಹಾಕಿದ್ದಾರೆ. ಗೋದ್ರಾ ಮಾಡುವ ಹುನ್ನಾರ ಯಾರದ್ದು? ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತರ ತುಷ್ಟಿ ಕರಣ ಮಾಡುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ವಿನಾಕಾರಣ ಇಂದು ಕಾರ್ಯಕರ್ತರ ಮೇಲೆ ಕೇಸುಗಳನ್ನು ದಾಖಲಿಸುತ್ತದೆ. ಇದರಿಂದ ಹೆದರಿ ಹಿಂದೆ ಸರಿಯುವವರು ನಾವಲ್ಲ. ದೇಶ-ಧರ್ಮಕ್ಕಾಗಿ ನೇಣುಗಂಬವೆರಲು ಸಹ ಸಿದ್ದರಿದ್ದೇವೆ. ಹಿಂದುಗಳನ್ನು ಕೆಣಕಬೇಡಿ ರಾಮಭಕ್ತರನ್ನು ಕೆಣಕಬೇಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರಮುಖರಾದ ಶಿವಕುಮಾರ್,ಸುಧೀಂದ್ರ. ವಿನಯ್, ರಾಘಣ್ಣ. ಸದ್ಗುಣ, ಪ್ರದೀಪ್, ಮೇಘರಾಜ್. ಮನು, ಪವನ, ಗವಿಶ್, ರಾಕೇಶ್, ಮಣಿಕಂಠ, ಕೃಷ್ಣ, ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Tags:
ಹಿಂದೂ ಜಾಗರಣ ವೇದಿಕೆ