ಕರಸೇವೆಗೆ ತೆರಳಿದ್ದ ವ್ಯಕ್ತಿಗಳ ಬಂಧನದ ಷಡ್ಯಂತ್ರ:ಸಂಸದ ಬಿ.ವೈ.ರಾಘವೇಂದ್ರ

ವಿಜಯ ಸಂಘರ್ಷ
ಶಿಕಾರಿಪುರ: ಭವ್ಯ ರಾಮಮಂದಿರ ಉದ್ಘಾಟನೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ತೆರಳಬಾರದು ಎನ್ನುವ ಉದ್ದೇಶಕ್ಕೆ ಕರಸೇವೆಗೆ ತೆರಳಿದ್ದ ವ್ಯಕ್ತಿಗಳ ಬಂಧನದ ಷಡ್ಯಂತ್ರ ರೂಪಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
 
ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಗೋದ್ರಾ ಘಟನೆ ಮರುಕಳಿಸುವುದು ಎನ್ನುವ ಹೇಳಿಕೆ, ಹಾಗೂ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಗಮನಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಬೃಹತ್ ರಾಮ ಮಂದಿರ ದೇವಸ್ಥಾನ ನಿರ್ಮಾಣ ಸಹಿಸಲಾಗುತ್ತಿಲ್ಲ.

ಬಾಬರಿ ಮಸೀದಿ ಬಿದ್ದಿರುವುದು ನೆಪ ಮಾಡಿ ಈ ಹಿಂದೆ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿತ್ತು, ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಘಟನೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕನ ಹಿತ ಬಲಿ ಕೊಟ್ಟಿದ್ದಾರೆ. ಶ್ರೀಕಾಂತ್ ಪೂಜಾರ್ ನನ್ನು ರೌಡಿ ಶೀಟರ್ ನಿಂದ ಕೈ ಬಿಟ್ಟು ಈಗ ಪುನಃ ಕರಸೇವಕ ಎಂದು ಬಂಧನ ಮಾಡಿರುವುದು ಗಮನಿಸಿದರೆ ಕಾಂಗ್ರೆಸ್ ಹಿಂದೂ ವಿರೋಧಿ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಕೆ ಎಸ್ ಗುರುಮೂರ್ತಿ ಮಾತನಾಡಿ ರಾಮಮಂದಿರ ಉದ್ಘಾಟನೆ ಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ದೇಶದ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ, ಅದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಜನರಿಗೆ ಗೊಂದಲ ಮೂಡುವ ಹೇಳಿಕೆ ನೀಡುತ್ತಿದ್ದು ಅಸಹನೆ ಮೂಡಿಸುತ್ತಿದ್ದಾರೆ ಜನತೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಪ್ರತಿಭಟನೆಗೂ ಮುನ್ನ ಸಂಸದ ಬಿ ವೈ ರಾಘವೇಂದ್ರ ರವರ ನೇತೃತ್ವದಲ್ಲಿ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕರಸೇವಕರ ಬಂಧನ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಚ್ ಟಿ ಬಳಿಗಾರ, ಬದ್ರಾಪುರ ಹಾಲಪ್ಪ, ವೀರೇಂದ್ರ ಪಾಟೀಲ್, ಹನುಮಂತಪ್ಪ, ಪುರಸಭಾ ಸದಸ್ಯ ಪಾಲಾಕ್ಷಪ್ಪ,ಬೆಣ್ಣೆ ಪ್ರವೀಣ್, ಬಂಗಾರಿ ನಾಯ್ಕ್, ನಿವೇದಿತಾ , ಗಿರೀಶ್ ಧಾರ್ವಾಡ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು