ವಿಜಯ ಸಂಘರ್ಷ
ಭದ್ರಾವತಿ: ನಗರ ಮೆಸ್ಕಾಂ ಉಪ ವಿಭಾಗ ಕಛೇರಿಯಲ್ಲಿ ಫೆ.7ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿ ಗಳು ಭಾಗವಹಿಸಲಿದ್ದು, ಸಂಬಂಧ ಪಟ್ಟ ಪ್ರದೇಶದ ಗ್ರಾಹಕರ ಅಹವಾಲು ಗಳನ್ನು ಸ್ವೀಕರಿಸುವರು.
ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 9448289454 ನ್ನು ಸಂಪರ್ಕಿಸಬಹುದಾಗಿದೆ.
Tags:
ಭದ್ರಾವತಿ ಮೆಸ್ಕಾಂ ಸುದ್ದಿ