ಐತಿಹಾಸಿಕ ಮಹತ್ವಕ್ಕೆ ಸಾಕ್ಷಿಕರಿಸಿದ 'ಶಿಲುಬೆ ಬೆಟ್ಟ' ಮಹೋತ್ಸವ

ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಮಾವಿನಕೆರೆಯ ಸಂತ ಕಿರಿಯ ಪುಷ್ಪ ತೆರೇಸಾ ದೇವಾಲಯದ ವತಿಯಿಂದ ಐತಿಹಾಸಿಕ ಮಾವಿನ ಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ಐತಿಹಾಸಿಕ ಮಹತ್ವವುಳ್ಳ ಮಹೋತ್ಸವ ಬೆಳಗ್ಗೆ 10 ಗಂಟೆಗೆ ಜೀವಂತ ಶಿಲುಬೆ ಹಾದಿಯ ಮೂಲಕ, ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದೃಶ್ಯವನ್ನು ಮರು ಸೃಷ್ಟಿಸುವ ಮೂಲಕ ಧಾರ್ಮಿಕತೆಯ ಮಹತ್ವವನ್ನು ಭಕ್ತಾಧಿಗಳಿಗೆ ತಿಳಿಸಲಾಯಿತು.

ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ಮೊದಲು ಮತ್ತು ಗೋಲ್ಗತಾ ಬೆಟ್ಟ ಪ್ರವೇಶಿಸುವ ಹಾದಿ ಬೀದಿಗಳಲ್ಲಿ ಚಿತ್ರಹಿಂಸೆ ನೀಡುತ್ತಾ, ಎಳೆದಾಡುವ ದೃಶ್ಯವನ್ನು ಮಾವಿನಕೆರೆಯ ಗ್ರಾಮದ ಹಾದಿ ಬೀದಿಗಳಲ್ಲಿ ಪಾತ್ರಧಾರಿಗಳಿಂದ ಮರುಸೃಷ್ಟಿ ಮಾಡಲಾಯಿತು.

ಹಾದಿಯ ಉದ್ದಕ್ಕೂ ರಸ್ತೆಯ ಅಕ್ಕಪಕ್ಕದಲ್ಲಿ ಯೇಸುಕ್ರಿಸ್ತರಿಗೆ ನೀಡಿದ ಚಿತ್ರಹಿಂಸೆ, ನೆನಪಿಸುವ ವಿವಿಧ ದೃಶ್ಯಗಳ ಪ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಶಿಲುಬೆ ಹಾದಿ, ಪೂಜಾ ವಿಧಿ-ವಿಧಾನ ಮತ್ತು ಶಿಲುಬೆಗೆ ಗೌರವ ಸನ್ಮಾನ ಗ್ರಾಮದ ಬೆಟ್ಟದ ಮೇಲೆ ನೆರವೇರಿಸಲಾಯಿತು.

ಮಾವಿನಕೆರೆ ಧರ್ಮ ಕೇಂದ್ರದ ವತಿಯಿಂದ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರಿಂದ ಐತಿಹಾಸಿಕ ದೃಶ್ಯದ ಮರು ಸೃಷ್ಟಿ ಮಾಡಿದ ಪಾತ್ರಧಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಧ್ಯಕ್ಷರಾದ ಒಂದನೇಯ ಬಿಷಪ್ ಫ್ರಾನ್ಸಿಸ್ ಸೆರಾವೋ, ಶಿವಮೊಗ್ಗ ಧರ್ಮ ಪ್ರಾಂತ್ಯಾಧಿಕಾರಿ ಫಾದರ್. ಸ್ಪ್ಯಾನಿ ಡಿಸೋಜಾ, ಧರ್ಮ ಕೇಂದ್ರದ ಗುರುಗಳಾದ ಫಾದರ್ ವಿನ್ಸೆಂಟ್ ಸೆರಾವೋ, ಕಾರೆಹಳ್ಳಿ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಡ, ಹಿರಿಯೂರು ಧರ್ಮ ಕೇಂದ್ರದ ಗುರುಗಳಾದ ಫಾದರ್ ರಿಚರ್ಡ್ ಮಸ್ಕರೇನಸ್, ಸಂತೋಷ್‌ ಪೆರೇರ, ಶಿವಮೊಗ್ಗ ಮಲ್ಲಿಗೆ ಮನೆ ಕೇಂದ್ರದ ಗುರುಗಳಾದ ರೊನಾಲ್ಡ್‌ ಡಿಕೋನ, ಚೆನ್ನಗಿರಿ ಧರ್ಮ ಕೇಂದ್ರದ ಗುರುಗಳಾದ ಫಾದರ್. ಜಾರ್ಜ್ ವಿನ್ಸೆಂಟ್ ಲೋಬೊ, ನ್ಯೂಟೌನ್ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜಾ, ಧರ್ಮ ಭಗಿನಿಯರು ಮತ್ತು ಧರ್ಮ ಕೇಂದ್ರದ ಹಾಗೂ ನೆರೆಯ ಧರ್ಮ ಕೇಂದ್ರದ ಭಕ್ತಾದಿಗಳು ಸುತ್ತ ಮುತ್ತಲ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು