ವಿಜಯ ಸಂಘರ್ಷ
ಬಿಜಾಪುರ: ಚಡಚಣ ತಾಲ್ಲೂಕಿನ ಧೂಳಖೇಡ ಗ್ರಾಮದ ಶ್ರೀ ಬೀಮಾ ಶಂಕರ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಫೆ.28 ರ ತಡರಾತ್ರಿ 19 ಲಕ್ಷ,55 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದ 6 ಜನ ಆರೋಪಿ ಗಳನ್ನು ಬಂಧಿಸಿ,ಅವರಿಂದ ಸುಮಾರು 27 ಲಕ್ಷ 15 ಸಾವಿರ ರುಪಾಯಿಗಳ ಮೌಲ್ಯದ ನಗದು,ದರೋಡೆಗೆ ಬಳಸಿದಿ 3 ವಾಹನಗಳನ್ನು ವಶಕ್ಕೆ ಪಡೆಯ ಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋುಷಿಕೇಶ್ ಸೋನಾವಣೆ ಹೇಳಿದರು.
ಝಳಕಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳ ಬಂಧನಕ್ಕಾಗಿ ಇಂಡಿ ಡಿವೈಎಸ್ಪಿ ಜಗದೀಶ ಎಚ್.ಎಸ್ ಮಾರ್ಗದರ್ಶನ ದಲ್ಲಿ ಚಡಚಣ ಸಿಪಿಐ ಎಚ್.ಡಿ. ಮುಲ್ಲಾ ಹಾಗೂ ಪಿಎಸ್‌ಐ ರಾಘವೇಂದ್ರ ಪೋತ ಇವರ ನೇತ್ರತ್ವದಲ್ಲಿದಲ್ಲಿ ತಂಡ ರಚಿಸಿ, ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿತ್ತು.
ಆರೋಪಿಗಳ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸ್ ತಂಡ, ಸೋಲಾಪೂರ ಜಿಲ್ಲೆಯ 3 ಜನ ಹಾಗೂ ಬಾಗಲಕೋಟೆ ಜಿಲ್ಲೆ 3 ಜನ ಸೇರಿ ಒಟ್ಟು 6 ಜನ ಆರೋಪಿಗಳನ್ನು ಬಂಧಿಸಿ,ದರೋಡೆಗೆ ಬಳಸಲಾದ ಒಂದು ಮಹಿಂದ್ರಾ ಪಿಕ್ಅಪ್, ಒಂದು ಕಾರು,ಒಂದು ಬೈಕ್ ,6 ಮೋಬೈಲ್ ಗಳು ಸೇರಿ ಆರೋಪಿ ಗಳಿಂದ 7 ಲಕ್ಷ.65 ಸಾವಿರ ನಗದು ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿಸಿದ ವರಿಷ್ಠಾಧಿಕಾರಿಗಳು,ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಪ್ರೊಫೆಷನರಿ ಎಸ್.ಪಿ,ಶಾಲು,ಸಿಪಿಐ ಎಚ್.ಡಿ.ಮುಲ್ಲಾ, ಪೊಲೀಸ್ ಸಿಬ್ಬಂದಿಗಳು ತನಿಖಾ ತಂಡದಲ್ಲಿದ್ದರು,