ವಿಜಯ ಸಂಘರ್ಷ
ಸಾಗರ: ತಾಲ್ಲೂಕಿನ ಬ್ಯಾಕೋಡ್ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ನೇಣು ಬಿಗಿದ ಸ್ಥಿತಿಯಲ್ಲಿರುವ ಮೃತದೇಹ ಸಂಪೂರ್ಣ ಕೊಳೆತಿದೆ. ಗ್ರಾಮಸ್ಥರು ಕಟ್ಟಿಗೆಗಾಗಿ ಕಾಡಿಗೆ ತೆರಳಿದ್ದಾಗ ಮೃತದೇಹ ಪತ್ತೆಯಾಗಿದೆ.
ಬ್ಯಾಕೋಡು ಸಮೀಪದ ಆವಿಗೆಯ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಗ್ರಾಮಸ್ಥರ ದೂರಿನ ಮೇರೆಗೆ ಕಾರ್ಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಮತ್ತು ಡಿಎನ್‌ಎ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಲಾಗಿದೆ.
2024ರ ಜ.20ರಂದು ಆವಿಗೆ ಗ್ರಾಮದ ನೀಲಾವತಿ ಎಂಬುವವರನ್ನು ಆಕೆಯ ಪತಿ ಲೋಕೇಶ್ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದ. ಆತ ಪೊಲೀಸರ ಕೈಗೆ ಸಿಗದೆ ಕಣ್ಮರೆ ಯಾಗಿದ್ದ. ಆವಿಗೆಯ ಕಾಡಿನಲ್ಲಿ ಸಿಕ್ಕ ಶವ ಲೋಕೇಶ್‌ನದ್ದೆ ಇರಬಹುದು ಎಂದು ಗ್ರಾಮಸ್ಥರು ಮತ್ತು ಆತನ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.