ವಿಜಯ ಸಂಘರ್ಷ
ಭದ್ರಾವತಿ: ಪತ್ರಕರ್ತ ತಟ್ಟೆಹಳ್ಳಿ ರವಿಕುಮಾರ್( 42) ಹೃದಯಾಘಾತ ದಿಂದ ಮಂಗಳವಾರ ನಿಧನರಾಗಿದ್ದಾರೆ.
ಅತ್ತೆಯ ಸಾವಿಗೆಂದು ಚನ್ನಗಿರಿಯ ತಾಲ್ಲೂಕಿನ ಸುಣ್ಣಿಗೆರೆಗೆ ಇಂದು ಹೋಗಿದ್ದರು.ಆ ಸಂದರ್ಭದಲ್ಲಿ ಎದೆಯ ನೋವು ಕಾಣಿಸಿಕೊಂಡಿದೆ. ಯಾರಿಗೂ ತಿಳಿಸದೇ ಓಮಿನಿಯಲ್ಲಿ ಲಾಕ್ ಮಾಡಿಕೊಂಡು ಕುಳಿತು ಕೊಂಡಿದ್ದಾರೆ. ಬಹಳ ಸಮಯ ವಾದರೂ ಯಾರಿಗೂ ಕಾಣದೆ ಇದ್ದುದರಿಂದ ಓಮಿನಿಯಲ್ಲಿ ಇರಬಹುದು ಎಂದು ಸಂಬಂಧಿಕರು ಹೋಗಿ ನೋಡಿದ್ದಾರೆ.
ಹೊರಗಿನಿಂದ ಎಷ್ಟು ಕರೆದರೂ ಎಚ್ಚರವಾಗದ ಕಾರಣ ಗಾಡಿಯ ಗಾಜನ್ನು ಒಡೆದು ನೋಡಿದಾಗ ಪ್ರಜ್ಞೆ ಇರಲಿಲ್ಲ. ತಕ್ಷಣ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತೆಗೆದು ಕೊಂಡು ಹೋಗಿದ್ದಾರೆ. ವೈದ್ಯರ ಪರೀಕ್ಷೆಯ ನಂತರ ವ್ಯಕ್ತಿ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿ ಇದ್ದಾರೆ.