ಇವತ್ತು ಕವಿತೆಯ ದಿನವಂತೆ.(ಕವಿತೆಯಂತಹ ಅವಳಿಗಾಗಿ! ಈ ಕವಿತೆ)_

ವಿಜಯ ಸಂಘರ್ಷ
ವ್ಯರ್ಥಮಾಡಬೇಡ ಕಣ್ಣೀರ
ಕಡುಬೇಸಿಗೆ ಕಾದಿದೆ!

ಸುಮ್ಮನೆ ನಿದ್ದೆಗೆಡಬೇಡ
ಕಾಯುತಿದೆ ಕನಸಿನೊಂದು ಎಸಳು!

ಹಸಿಹುಸಿ ಮಾತನಾಡಬೇಡ
ಶಬುದಗಳಿಗೀಗ ಬಾರೀ ಬೇಡಿಕೆ

ದೀವಳಿಗೆಯೆಂದು ಸಂಭ್ರಮಿಸಬೇಡ
ಕೊಲ್ಲಲೆಂದೇ ಹುಟ್ಟಿದವರ ರಣಕೇಕೆಯಿದು

ಸತ್ತವರಿಗಾಗಿ ಮರುಗಬೇಡ
ಬದುಕಿದ ತಪ್ಪಿಗೆ ಕೊರಗಬೇಕಾದ ಸಮಯ ಸಂದಿದೆ!

ಕವಿತೆಗಳೆಲ್ಲ ಸತ್ಯವೆಂದು ನಂಬಬೇಡ  
ಸುಳ್ಳುಗಳೇ ಕವಿತೆಯಾಗುವ ಕಷ್ಟದ ಕಾಲವಿದು!

ಎಚ್ಚರದಿಂದಿರು
ಎನ್ನ ಪ್ರೇಮವನೆಂದೂ ಅನುಮಾನಿಸದಿರು
.........
ಕು.ಸ.ಮಧುಸೂದನ ರಂಗೇನಹಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು