ವಿಜಯ ಸಂಘರ್ಷ
ಭದ್ರಾವತಿ: ಲೋಕಸಭಾ ಚುನಾವಣೆಯ ಸಿದ್ಧತೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದೃಷ್ಟಿಯಿಂದ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ಗಳನ್ನಾಗಿ 7 ಜನ ಮುಖಂಡರುಗಳನ್ನು ಉಸ್ತುವಾರಿಗಳನ್ನಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇಮಿಸಿದ್ದಾರೆ.
ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಎಂಎಡಿಬಿ ಅಧ್ಯಕ್ಷಡಾ.ಆರ್.ಮಂಜುನಾಥಗೌಡ,
ಶಿವಮೊಗ್ಗ ಗ್ರಾಮಾಂತರ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಶಿಕಾರಿಪುರ- ಮಾಜಿ ವಿಧಾನಪರಿಷತ್ ಸದಸ್ಯ
ಆರ್.ಪ್ರಸನ್ನಕುಮಾರ್, ಭದ್ರಾವತಿ- ಎಂ.ಶ್ರೀಕಾಂತ್, ಸೊರಬ-ಕಲಗೋಡು ರತ್ನಾಕರ್, ಶಿವಮೊಗ್ಗ ನಗರ- ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಬಲ್ಕೀಶ್ ಬಾನು ಹಾಗೂ ತೀರ್ಥಹಳ್ಳಿ- ಜಿಲ್ಲಾ ವಕ್ತಾರ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ರವರನ್ನು ನೇಮಿಸಲಾಗಿದೆ.
ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ಆಯಾಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಭೆಗಳನ್ನು ಆಯೋಜಿಸಿ ಪಕ್ಷದ ಕಾರ್ಯಕರ್ತರನ್ನು ಜಾಗೃತಿ ಗೊಳಿಸಲು ಜಿಲ್ಲಾಧ್ಯಕ್ಷರು ನೇಮಕಾತಿ ಅದೇಶದಲ್ಲಿ ಉಸ್ತುವಾರಿಗಳಿಗೆ ಸೂಚನೆ ನೀಡಿದ್ದಾರೆ.