ವಿಜಯ ಸಂಘರ್ಷ
ಸಾಗರ (ಆನಂದಪುರ): ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಇದು ಬಡವರ ಪಾಲಿಗೆ ಆಶಾಕಿರಣವಾಗಿದೆ. ಗ್ಯಾರಂಟಿಗಳ ನಡುವೆಯೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಅವರು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಹಳ್ಳಿ ಸಂತೆಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಸರ್ಕಾರದ ಹಾಗೂ ಮಾಜಿ ಶಾಸಕರ ಅವಧಿಯಲ್ಲಾದ 48 ಲಕ್ಷ ರೂಗಳ ಈ ಕಾಮಗಾರಿಯನ್ನು ಉದ್ಘಾಟಿಸುವ ಭಾಗ್ಯ ತಾಲ್ಲೂಕಿನ ಜನತೆ ನನಗೆ ನೀಡಿದ್ದಕ್ಕೆ ನಾನು ಅಭಾರಿಯಾಗಿದ್ದೇನೆ.
ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ, ನೊಂದವರಿಗೆ ಆಸರೆಯಾಗುವ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ. ಎಪಿಎಂಸಿ ಆವರಣದಲ್ಲಿ ಹೈಮಾಸ್ಕಿಂಗ್ ದೀಪಗಳನ್ನು ಅಳವಡಿಸಿ, ಸಂಪರ್ಕ ರಸ್ತೆಯನ್ನು ಸಹ ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರಲಾಗುತ್ತದೆ. ಬೇರೆ ಗ್ರಾಮಗಳಲ್ಲಿ ಇಂತಹ ಹಳ್ಳಿ ಸಂತೆ ಕಟ್ಟೆ ನಿರ್ಮಿಸಲು ಸಾರ್ವಜನಿಕರು ಕೋರಿದ್ದು ಈ ಯೋಜನೆಯನ್ನು ಅಗತ್ಯತೆಗೆ ಅನುಗುಣವಾಗಿ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾಂಗಣದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಕುಂದುಕೊರತೆ ಯಾಗದoತೆ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕೆಂದು ಗ್ರಾಮಾಡಳಿತಕ್ಕೆ ಸೂಚಿಸಿದರು.
ಈ ಸಂದರ್ಭದಲ್ಲಿ ಆನಂದಪುರ ಗ್ರಾಮಪಂಚಾಯತಿ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ರೂಪಲತಾ, ಸದಸ್ಯರಾದ ಸಿರಿಜಾನ್, ಗಜೇಂದ್ರ, ಚೌಡಪ್ಪ, ಖಲೀಮುಲ್ಲಾ ಖಾನ್, ಸೋಮಶೇಖರ್ ಲ್ಯಾವಿಗೆರೆ, ಚೇತನ್‌ರಾಜ್, ರವಿಕುಮಾರ್, ಉಮೇಶ್ ಎನ್ ಸಿದ್ದೇಶ್ವರಕಾಲೋನಿ, ರಮಾನಂದ ಸಾಗರ್, ರಜಾಕ್ ಮತ್ತಿತರಿದ್ದರು.
Tags:
ಸಾಗರ ಆನಂದಪುರ ಸುದ್ದಿ