ವಿಜಯ ಸಂಘರ್ಷ
ಭದ್ರಾವತಿ: ದೇಶದ ಕೈಗಾರಿಕಾ ಭೂ ಪುಟದಲ್ಲಿ ಮಹತ್ವದ ಸ್ಥಾನ ಪಡೆದು ಗಮನ ಸೆಳೆದಿದ್ದ ಹಾಗೂ ಜನರ ಜೀವನಾಡಿಯಾಗಿದ್ದ ಅವಳಿ ಕಾರ್ಖಾನೆಗಳ ಅಳಿವಿನಿಂದಾಗಿ ಭದ್ರಾವತಿಯ ಆರ್ಥಿಕ ಚಟುವಟಿಕೆ ಸಂಪೂರ್ಣ ಕುಂಠಿತ ಗೊಂಡಿದ್ದು, ವಿದ್ಯಾವಂತ ಯುವಕರು ಹೊಟ್ಟೆ ಪಾಡಿಗಾಗಿ ಬೇರೆಡೆ ಗುಳೆ ಹೋಗುವ, ಎಷ್ಟೋ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡು ವಂಥಹ ಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿಯಾಗಿದೆ ವಿಜಯ ಡ್ರೈವಿಂಗ್ ಸ್ಕೂಲ್ ಮಾಲೀಕ ಜಾನ್‌ಬೆನ್ನಿ ಹೇಳಿದರು.
ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿದಿಗಳು ಸುಳ್ಳು ಭರವಸೆ ನೀಡಿ ಮತದಾರರನ್ನು ವಂಚಿಸಿ ಅಧಿಕಾರದ ಗದ್ದುಗೆ ಹಿಡಿಯುವುದನ್ನು ಕರಗತ ಮಾಡಿ ಕೊಂಡಿರುವುದು ಬೇಸರದ ಸಂಗತಿಯಾಗಿದೆ ಎಂದರು.
ವಿಜಯ್ ಡ್ರೈವಿಂಗ್ ಸ್ಕೂಲ್ ಹೆಸರಿನಲ್ಲಿ ಭದ್ರಾವತಿಯಲ್ಲಿ ಕಳೆದ 25 ವರ್ಷಗಳಿಂದ ಚಾಲನಾ ಸಂಸ್ಥೆಯನ್ನು ನಡೆಸುವ ಮೂಲಕ ಸಾವಿರಾರು ಮಂದಿಗೆ ಚಾಲನಾ ತರಬೇತಿ ನೀಡಿ ವೃತ್ತಿ ಬದುಕಿನ ಜೊತೆಗೆ ಕೈಲಾದ ಮಟ್ಟಿಗೆ ಜನಪರ ಕೆಲಸ ಕಾರ್ಯಗಳನ್ನು, ಸಮಾಜ ಸೇವೆಯನ್ನು ಎಲೆ ಮರೆಕಾಯಿ ರೀತಿಯಲ್ಲಿ ನಿಸ್ವಾರ್ಥವಾಗಿ ಪರಿಶ್ರಮದ ಸಂಪಾದನೆಯಲ್ಲಿ ನಡೆಸಿ ಕೊಂಡು ಬರುತ್ತಿದ್ದು, ನಗರದ ನಾಗರಿಕರ ಹಾಗೂ ಭದ್ರಾವತಿಯ ಅಭಿವೃದ್ಧಿಯ ಹಿನ್ನೆಲೆ ಯಲ್ಲಿ ಸರ್ಕಾರದ ಸವಲತ್ತು ಗಳನ್ನು ಹಾಗೂ ಯೋಜನೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಯ ಚಿಂತನೆಯ ಹಿನ್ನೆಲೆ ಯಲ್ಲಿ ಹಾಗೂ ಹಿತೈಷಿಗಳ ಸಲಹೆ ಮೇರೆಗೆ ಎರಡು ಬಾರಿ ಭದ್ರಾವತಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಜಾನ್‌ಬೆನ್ನಿ ತಿಳಿಸಿದರು.