ಮಹಿಳೆಯರು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಖಿನ್ನತೆ ದೂರ: ಭಾರತಿ ಚಂದ್ರಶೇಖರ್

ವಿಜಯ ಸಂಘರ್ಷ 
ಶಿವಮೊಗ್ಗ: ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೇ ಸಂಘ ಸಂಸ್ಥೆಗಳ ಮುಖಾಂತರ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಾಗ ಖಿನ್ನತೆ ದೂರವಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಶಾಖೆ ಗೈಡ್ ವಿಭಾಗದ ರಾಜ್ಯ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್ ಹೇಳಿದರು.

ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಸ್ಕೌಟ್ ಮತ್ತು ಗೈಡ್ಸ್ನಲ್ಲಿ ಭಾಗಿಯಾಗು ವುದರಿಂದ ಶಿಸ್ತುಬದ್ಧ ಹಾಗೂ ಆತ್ಮವಿಶ್ವಾಸದ ಜೀವನಶೈಲಿ ನಮ್ಮದಾಗುತ್ತದೆ. ಮಕ್ಕಳನ್ನು ಬಾಲ್ಯದಿಂದಲೇ ಸೇರಿಸಬೇಕು ಎಂದು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಭವಿಷ್ಯದ ದಾರಿದೀಪವಾಗಿದ್ದು, ಪರಿಪೂರ್ಣ ವ್ಯಕ್ತಿಯಾಗಲು ಮಾರ್ಗದರ್ಶನ ನೀಡುತ್ತದೆ. ನಮ್ಮ ಶಾಲೆಗಳಲ್ಲಿರುವ ಗೈಡ್ ಶಿಕ್ಷಕರು ಮಕ್ಕಳಿಗೆ ತರಬೇತಿ ನೀಡುವುದರ ಮೂಲಕ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.

ಗೈಡ್ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಕುರಿತು ಸೂಕ್ತ ತರಬೇತಿ ನೀಡಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ಒಬ್ಬ ಸ್ಕೌಟ್ ಮತ್ತು ಗೈಡ್ ಇರಬೇಕು ಎಂದು ತಿಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಕಮೀಷನರ್ ಶಕುಂತಲಾ ಚಂದ್ರಶೇಖರ್ ಮಾತನಾಡಿದರು.

ವಿವಿಧ ತಾಲ್ಲೂಕಿನ ಗೈಡ್ ಶಿಕ್ಷಕರಾದ ಕಸ್ತೂರಬಾ ಪ್ರೌಢಶಾಲೆಯ ದ್ರಾಕ್ಷಾಯಿಣಿ ರಾಜಕುಮಾರ್, ತೀರ್ಥಹಳ್ಳೀ ವಿವೇಕಾನಂದ ಶಾಲೆಯ ಜಯಂತಿ, ಶಿರಾಳಕೊಪ್ಪ ಉರ್ದು ಶಾಲೆಯ ಕಸ್ತೂರವ್ವ, ಭದ್ರಾವತಿಯ ಸುಮತಿ ಕಾರಂತ್, ಸೊರಬ ತತ್ತೂರಿನ ಗಂಗಮ್ಮರವರನ್ನು ಸನ್ಮಾನಿಸಲಾಯಿತು.

ಡಾ. ಹಾಲಮ್ಮ, ರಾಜ್ಯ ಸಂಘಟನಾ ಆಯುಕ್ತೆ ಭಾರತಿ ಡಯಾಸ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ ಕುಮಾರ್, ಮಲ್ಲಿಕಾರ್ಜುನ ಕಾನೂರು, ಸಹ ಕಾರ್ಯದರ್ಶಿ ವೈ.ಆರ್. ವಿರೇಶಪ್ಪ, ಮೀನಾಕ್ಷಮ್ಮ, ಶಾಂತಮ್ಮ, ಸುನಂದಮ್ಮ ಹಾಗೂ ಪದಾಧಿಕಾರಿ ಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು