ಸಾವು ಗೆದ್ದ ವಿಜಯಪುರದ ಸಾತ್ವಿಕ್: ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅಭಿನಂದನೆ

ವಿಜಯ ಸಂಘರ್ಷ 
ವಿಜಯಪುರ: ತೆರೆದ ಕೊಳವೆಬಾವಿಗೆ ಬಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಮಗು ಸಾತ್ವಿಕ್ ಕೊನೆಗೂ ಬದುಕಿ ಬಂದಿದ್ದಾನೆ.

ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿ ಶಾಮಕ ಮತ್ತು ಪೊಲೀಸರು ಸತತ 21ಗಂಟೆಗಳ ಕಾಲ‌ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.‌ ಮಧ್ಯಾಹ್ನ 1.44ಕ್ಕೆ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಯಿತು.

ಮರು ಜನ್ಮ ಪಡೆದುಬಂದ 14 ತಿಂಗಳ ಮಗು ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾನೆ. ಅಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ರಕ್ಷಣಾ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನ ಹರ್ಷೋದ್ಗಾರ ವ್ಯಕ್ತಪಡಿಸಿದರು. ಜಯ ಘೋಷಣೆಗಳು ಮೊಳಗಿದವು. ಸುಡು ಬಿಸಿಲಿನಲ್ಲೂ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿತು.

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅಭಿನಂದನೆ

ಸಿಬ್ಬಂದಿಗೆ ಧನ್ಯವಾದ ಹೇಳಿದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ್
ಕಾರ್ಯಾಚರಣೆ ಮಾಡಿದ ಸಿಬ್ವಂದಿಗೆ ಧನ್ಯವಾದಗಳು ಹೇಳಿದ್ದಾರೆ.

ಇಡೀ ರಾಜ್ಯದ ಜನರ ಪ್ರಾರ್ಥನೆ ಫಲಿಸಿದೆ. ನಿನ್ನೆ ಸಂಜೆ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ನಿರಂತರ ಕಾರ್ಯಾಚರಣೆ ಮೂಲಕ ಜಿಲ್ಲಾಡಳಿತ, ರಾಷ್ಟ್ರೀಯ-ರಾಜ್ಯ ವಿಪತ್ತು ಸಂರಕ್ಷಣಾ ದಳದವರು ಹೊರ ತೆಗೆದ ಕಾರ್ಯ ಅವಿಸ್ಮರಣೀಯ. ಮುದ್ದಾದ ಮಗು ಸಾತ್ವಿಕ್ ಭವಿಷ್ಯಕ್ಕೆ ಶುಭಾಶಯ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು