ಪ್ರಜ್ವಲ್ ರೇವಣ್ಣ ನವರ ಪ್ರಕರಣ ಎಸ್ಐಟಿ ಗೆ ವಹಿಸಿದ್ದು ತೃಪ್ತಿ ಇದೆ: ವಿದ್ಯಾವತಿ ಅಂಕಲಗಿ

ವಿಜಯ ಸಂಘರ್ಷ 
ವಿಜಯಪುರ: ಕರ್ನಾಟಕದ ಎಸ್ಐಟಿ ಬಗ್ಗೆ ಭರವಸೆ ಇದ್ದು, ಪ್ರಜ್ವಲ್ ರೇವಣ್ಣ ನವರ ಪ್ರಕರಣ ರಾಜ್ಯ ಸರಕಾರವು ಎಸ್ಐಟಿ ಗೆ ವಹಿಸಿದ್ದು ತೃಪ್ತಿ ಇದೆ ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾವತಿ ಅಂಕಲಗಿ ಹೇಳಿದರು. 

ಬುಧವಾರ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. 

ಕರ್ನಾಟಕದ ಪೊಲೀಸರು ದಕ್ಷರಿದ್ದು, ಈಗಾಗಲೇ ಛಾಪಾ ಕಾಗದ ಪ್ರಕರಣದಲ್ಲಿ ಹಾಗೂ ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣ ವನ್ನು ಭೇದಿಸಿದ ಪ್ರಕರಣದಲ್ಲಿ ಇದನ್ನು ಸಾಬೀತು ಮಾಡಿದ್ದಾರೆ. ಅಲ್ಲದೆ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಕರೆತಂದು ಬಂಧಿಸಲು ಕೇಂದ್ರ ಸರಕಾರದವರು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. 

ನಾಗಠಾಣ ಶಾಸಕರಾದ ವಿಠ್ಠಲ ಕತಕ ಧೋಂಡ ಮಾತನಾಡಿ ಪ್ರಜ್ವಲ್ ರೇವಣ್ಣ ನವರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಹಾಗೂ ತುರ್ತಾಗಿ ಭರವಸೆಯ ಅವಶ್ಯಕತೆ ಇದೆ. ಸದರಿ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದು, ನಾಡಿನ ಜನತೆ ತಲೆತಗ್ಗಿಸುವಂತಹ ಹಾಗೂ ನಾಚಿಕೆಗೇಡಿನ ವಿಷಯವಾಗಿದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಹಾದೇವಿ ಗೋಕಾಕ, ಭಾರತಿ ಹೊಸಮನಿ, ಮಂಜುಳಾ ಗಾಯಕವಾಡ, ಆಸ್ಮಾ ಕಾಲೇಬಾಗ, ಹಮೀದಾ ಪಟೇಲ, ಮುಸ್ಕಾನ ಶಿವಣಗಿ, ಅಂಬಿಕಾ ಪಾಟೀಲ, ಶರಣಮ್ಮಾ ನಾಯಕ, ಜ್ಯೋತಿ ಗುಡಿಮನಿ, ಲಲಿತಾ ನಾಯಕ, ಭಾಗೀರಥಿ ನಾಗರಹಳ್ಳಿ, ಕಾಶಿಬಾಯಿ ಹಡಪದ, ಗಂಗವ್ವ ಕಣಮುಚನಾಳ, ಸುಮಿತ್ರಾ ಹನೂರ, ಶಶಿಕಲಾ ಮಣೂರ, ಶಾರದಾ ಬೆಟಗೇರಿ, ಅಶ್ವಿನಿ ಪಾತ್ರೋಟಿ, ಶಮೀಮಾ ಅಕ್ಕಲಕೋಟ, ಸಂಜನಾ ಬಜಂತ್ರಿ ಮುಂತಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು