ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ

ವಿಜಯ ಸಂಘರ್ಷ 
ಸಾಗರ: ಶರಾವತಿ ಕೊಳ್ಳದ ವ್ಯಾಪ್ತಿ ಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತಿರುವು ದರಿಂದ, ಲಿಂಗನಮಕ್ಕಿ ಜಲಾನಯನ ಪ್ರದೇಶದ ಕೆಳದಂಡೆ ಭಾಗದಲ್ಲಿ ಮಳೆ ನೀರು ಹರಿಯುತ್ತಿದೆ. ಇದರಿಂದ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತ ಗಳಲ್ಲಿ ಜಲಧಾರೆ ಧುಮುಕುತ್ತಿದೆ.

ಬೇಸಿಗೆಯ ಬಿಸಿಲ ಝಳದಿಂದಾಗಿ ಜಲಮೂಲ ಬತ್ತಿ ಹೋಗಿದ್ದರಿಂದ ಜಲಪಾತದ ಸೌಂದರ್ಯ ಸೊರಗಿತ್ತು. ಜೋಗಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗೆ ಕೇವಲ ಬೋರ್ಬಂಡೆ ಗಳ ದರ್ಶನವಾಗುತ್ತಿತ್ತು. ಆದರೆ ಈಗ ಜೋಗದ ಸೌಂದರ್ಯ ನಿಧಾನವಾಗಿ ಮರುಕಳಿಸುತ್ತಿದೆ. ಜಲಪಾತದ ನೀರನ್ನು ಆಶ್ರಯಿಸಿದ್ದ ಜೀವ ಸಂಕುಲಗಳು‌, ಸರೀಸೃಪಗಳು ಹಾಗೂ ಜಲಚರಗಳಲ್ಲೂ ಹೊಸ ಚೈತನ್ಯ ಮೂಡಿದೆ. ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. 

ಜೋಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಪ್ರವಾಸಿಗರು ಅತಿ ಹತ್ತಿರದಿಂದ ಜಲಪಾತದ ಜಲಸಿರಿಯ ವೈಭವ ಕಣ್ತುಂಬಿಕೊಳ್ಳಲು ಅನುವು ಮಾಡಿ ಕೊಡುವ ಸಲುವಾಗಿ ಬೃಹತ್ ವೀಕ್ಷಣಾ ಗೋಪುರಗಳು ತಲೆ ಎತ್ತುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು