ವಿಜಯ ಸಂಘರ್ಷ
ಭದ್ರಾವತಿ: ದಲಿತರ ಭೂಮಿಯನ್ನು ಎಂಪಿಎಂ ನವರು ಆಕ್ರಮಿಸಿರುವು ದನ್ನು ಜಂಟಿ ಸರ್ವೆ ಮಾಡಿಸಿ, ಹದ್ದು ಬಸ್ತು ಮಾಡಿ ಜಮೀನು ಬಿಡಿಸಿ ಕೊಡಲು ಒತ್ತಾಯಿಸಿ ಕರ್ನಾಟಕ ದಸಂಸ (ಅಂಬೇಡ್ಕರ್‌ವಾದ) ತಾಲೂಕು ಶಾಖೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಹೊಳೆಹೊನ್ನೂರು ಹೋಬಳಿ, ಡಿ.ಬಿ.ಹಳ್ಳಿ ಗ್ರಾಮದ ಹಾಗೂ ಅರದೊಟ್ಟಲು ಗ್ರಾಮದ 14 ದಲಿತ ಜನರು ತಮಗೆ ಸೇರಿದ ವಿಸ್ತೀರ್ಣ 8 ಎಕರೆ 20 ಗುಂಟೆ ಜಮೀನನ್ನು ಅರದೊಟ್ಟಲು ಗ್ರಾಮದ ಗ್ರಾಮಾಠಾಣಾಕ್ಕೆ ಬಿಟ್ಟು ಕೊಟ್ಟಿದ್ದರಿಂದ ಇದರ ಬದಲಿಗೆ ಸರ್ಕಾರವು 14 ಮಂದಿಗೆ ತಲಾ 2 ಎಕರೆ ಯಂತೆ ಒಟ್ಟು 28 ಎಕರೆ ಭೂಮಿಯ ಚಂದನಕೆರೆ ಗ್ರಾಮದ ಸ. ನಂ 12ರ 413 ಎಕರೆ ಗೋಮಾಳ ಜಮೀನಿನ ಪೈಕಿ 28 ಎಕರೆ ಭೂಮಿ ಎಲ್‌ಎನ್‌ಡಿ 147/60-61 ರಂತೆ ಸಾಗು ದಳಿ ಚೀಟಿಯ ಸರ್ಕಾರ ನೀಡಿದೆ ಹಾಗೂ ಚಂದನ ಕೆರೆಯ ಪರಿಶಿಷ್ಟಜಾತಿ ಆದಿಕರ್ನಾಟಕ ಜನಾಂಗಕ್ಕೆ ಸೇರಿದ ಸುಮಾರು 21 ಜನ ದಲಿತರು ಹಾಗೂ ಕಲ್ಲಿಹಾಳ್ ಗ್ರಾಮದ 20 ಜನತಲಾ 2 ಎಕರೆ ಯಂತೆ ಸಾಗುವಳಿ ಮಾಡುತ್ತಾ ನಮೂನೆ 50-53 ರಲ್ಲಿ ಅರ್ಜಿ ಸಲ್ಲಿಸಿ ಸ್ವಾಧೀನಾನು ಭವದಲ್ಲಿದ್ದರು.
1985-86 ರಲ್ಲಿ ಎಂಪಿ.ಎಂನವರು ನೀಲಗಿರಿ
ನೆಡುತೋಪುಮಾಡಿದ್ದು, ದಲಿತರು ಭೂಮಿಯ ಮೇಲೆ ಹೋಗದಂತೆ ತಡೆದು ದೌರ್ಜನ್ಯವೆಸಗಿ ರುತ್ತಾರೆ. ದಲಿತರು ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡುತ್ತಲೇ ಹೋರಾಡು ತ್ತಿದ್ದರೂ ಎಂಪಿಎಂ ನವರ ದೌರ್ಜನ್ಯ ದಿಂದ ಭೂಮಿ ಅವರ ಕೈಗೆ ಸೇರಲಿಲ್ಲ. ಎಂದು ಅಳಲು ವ್ಯಕ್ತಪಡಿಸಲಾಗಿದೆ.
ದಲಿತರಿಗೆ ಸೇರಿದ ಭೂಮಿಯ ಇತ್ತೀಚೆಗೆ ಕೆಲವರು ಅಕ್ರಮವಾಗಿ ಬಗರ್ ಹುಕುಂ ಸಾಗುವಳಿ ಮಾಡಲು ಮುಂದಾಗಿರುವುದು ಸಮಿತಿಯ ಗಮನಕ್ಕೆ ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ತಾವು ಖುದ್ದಾಗಿ ತಕ್ಷಣ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಗಳೊಂದಿಗೆ ಆಗಮಿಸಿ ಜಂಟಿ ಸರ್ವೆ ಕಾರ್ಯನಡೆಸಿ ಸರ್ಕಾರದಿಂದ ದಲಿತರಿಗೆ ಚಂದನ ಕೆರೆ ಗ್ರಾಮದ ಸರ್ವೆ ನಂ.12ರಲ್ಲಿ ಮಂಜೂರಾದ ಭೂಮಿ ಸರ್ವೆ ಕಾರ್ಯ ನಡೆಸಿ ಹದ್ದುಬಸ್ತು ಮಾಡಿಸಿ ದಲಿತರಿಗೆ ಭೂಮಿಬಿಡಿಸಿ ಕೊಡಬೇಕೆಂದು ಹಾಗು ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರಾತಿ ಹಂತದಲ್ಲಿದ್ದ ಭೂಮಿ ಸಾಗುವಳಿ ಪತ್ರ ಕೊಡಿಸಿ ಕೊಡಬೇಕೆಂದು ಕೋರಲಾಗಿದೆ.
ಸಮಿತಿ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟುರಾಜು ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲೂಕು ಪ್ರಧಾನ ಸಂಚಾಲಕ ಪರಮೇಶ್ ಸೊಗೂರು, ತರೀಕೆರೆ ತಾಲೂಕು ಸಂಚಾಲಕ ರಾಮಚಂದ್ರ, ಟಿ.ರುದ್ರೇಶ್ ಅತ್ತಿಗುಂದ, ಪಾಷ, ಗ್ರಾಮಸ್ಥರಿದ್ದರು.
Tags:
ಭದ್ರಾವತಿ ದಸಂಸ ಪ್ರೊಟೆಸ್ಟ್