ವಿಜಯ ಸಂಘರ್ಷ
ಸಾಗರ: ಆನಂದಪುರ ಸಮೀಪದ ಹೊಸೂರು ಗ್ರಾ.ಪಂ.ವ್ಯಾಪ್ತಿಯ ಹೊನಗೋಡು ಗ್ರಾಮದಲ್ಲಿ ನಡೆದ ಸ್ವರ ಮೇಧ ಉತ್ಸವ ಯಶಸ್ವಿಯಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕಲಾವಿದ ಗುಡ್ಡಪ್ಪ ಜೋಗಿ ಮಾತನಾಡಿ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಗಳು ಗ್ರಾಮೀಣ ಭಾಗದಲ್ಲಿ ಯತೇಚ್ಚವಾಗಿದೆ. ಗ್ರಾಮೀಣ ಕಲಾವಿದರಿಗೆ ಸೂಕ್ತ ವೇದಿಕೆ ದೊರೆತರೆ ತಮ್ಮ ಕಲಾ ಪ್ರತಿಭೆಯನ್ನು ಉತ್ತಮವಾಗಿ ಹೊರ ಹೊಮ್ಮಿಸುತ್ತಾರೆ. ಸ್ವರಮೇಧ ಉತ್ಸವ ಕಲಾವಿದರನ್ನು ಉತ್ತೇಜಿಸುವ ಅಪರೂಪದ ಕಾರ್ಯಕ್ರಮ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಾಗರದ ಪರಿಣಿತಿ ಕಲಾ ಕೇಂದ್ರದ ನಾಟ್ಯಾಚಾರ್ಯ ವಿದ್ವಾನ್ ಗೋಪಾಲ ಮಾತನಾಡಿ ಕಲಾ ಉತ್ಸವಗಳನ್ನು ನಡೆಸುವ ಪ್ರಮುಖ ಧೈಯವೇ ಕಲಾವಿದರನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವುದು. ಶತ ಶತಮಾನಗಳಿಂದ ಪರಂಪರಾಗತವಾಗಿ ಬೆಳೆದು ಬಂದ ಕಲೆ ಇನ್ನಷ್ಟು ಶತಮಾನ ಜನರಲ್ಲಿ ಉಳಿಯುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.
ಸ್ವರ ಮೇಧಾ ಸಂಸ್ಥೆಯ ಸ್ಥಾಪಕ ಡಾ.ಚಿನ್ಮಯ ಎಂ.ರಾವ್ ಮಾತನಾಡಿ ಸಂಗೀತವೆಂದರೆ ಪ್ರಕೃತಿ ನಮ್ಮ ಸುತ್ತ ಮುತ್ತಲ ಪರಿಸರದಲ್ಲಿ ಸಂಗೀತ ಸಹಜ ವಾಗಿ ಬೆರೆತಿದೆ. ಇಂತಹ ಸಂಗೀತವನ್ನು ಅಧ್ಯಯನಮಾಡಿ ಅಭಿವ್ಯಕ್ತಿ ಪಡುಸುವುದೇ ಕಲಾವಿದರ ಸಾಧನೆ ಎಂದರು. ಕಲೆಗೆ ಜಾತಿ, ಮತ ಧರ್ಮ ಮತ್ತು ಪ್ರದೇಶಿಕ ಬೇಧವಿಲ್ಲ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಪ್ರಗತಿಪರ ಕೃಷಿಕ ಮೃತ್ಯುಂಜಯ ರಾವ್, ಪಿ.ಟಿ.ಶಂಕರ ನಾರಾಯಣ ಹೆಗಡೆ, ಕೃಪಾನಂದ, ಸುಬ್ರಾವ್, ಯುವ ನರ್ತಕಿ ಮಹತಿ ಆರ್.ಭಟ್, ಕಲಾವಿದರಾದ ಸುಶ್ರುತ ಭಾರಧ್ವಾಜ್, ಬಿ.ಜಿ.ಶ್ರೀನಿಧಿ ಇನ್ನಿತರರು ಉಪಸ್ಥಿತರಿದ್ದರು.
ಗಣಪತಿ ಹೆಗಡೆ ಹಡಿನಬಾಳು ಇವರಿಂದ ಶ್ರೀಧರ ಗುರು ಚರಿತ್ರೆ ಹರಿಕಥಾ ಪ್ರದರ್ಶನ ನಡೆಯಿತು.ಅರುಣ್ ಭಟ್ ಮೂರುರು ಮತ್ತು ಗಜಾನನ ಯಾಜಿ ಮಣ್ಣಿಗೆ ಸಾಥ್ ನೀಡಿದರು.
ಇದೆ ಸಂದರ್ಭದಲ್ಲಿ ಸ್ವರಮೇಧ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸೇರಿ ಹುಟ್ಟು ಹಾಕಿದ 'ಸ್ವರ ಮೇಧ ವಿಶ್ವ ಸಂಗೀತ ಸಭಾಂಗಣಮ್' ಎಂಬ ಹೊರಾಂಗಣ ವೇದಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
Tags:
ಸಾಗರ ಆನಂದಪುರ ಸುದ್ದಿ