ವಿಜಯ ಸಂಘರ್ಷ
ಭದ್ರಾವತಿ: ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಸಿಕೊಂಡಿದ್ದ ವರಿಗೆ ಟಿಕೇಟು ನೀಡದೆ ವಂಚಿಸಿರುವ ಬಿಜೆಪಿಯಲ್ಲಿಗ ಸಿದ್ದಾಂತಗಳೆಲ್ಲಾ ನಾಶವಾಗಿದೆ. ನನಗೆ ಬಕೀಟು ಹಿಡಿಯುವ ಸಂಸ್ಕೃತಿ ಗೊತ್ತಿಲ್ಲ. ಗಾಡ್‌ಫಾದರ್ ಬೆನ್ನು ಹತ್ತುವ ಸಂಸ್ಕೃತಿ ತಿಳಿದಿಲ್ಲವೆಂದು ಉಡುಪಿ ಮಾಜಿ ಶಾಸಕ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಆರೋಪಿಸಿದರು.
ಅವರು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಬಿಜೆಪಿ ಪಕ್ಷದಲ್ಲಿ ನಿಷ್ಟಾವಂತನಾಗಿ ದುಡಿದು ಪಕ್ಷವನ್ನು ಕಟ್ಟಿ ಬೆಳೆಸಿ ನಾವೂ ಬೆಳೆದು 3 ಬಾರಿ ಉಡುಪಿಯಿಂದ ಗೆದ್ದು ಕ್ರಿಯಾಶೀಲ ಶಾಸಕನೆಂದು ಹೆಸರು ಮಾಡಿದ್ದೇನೆ. ಕರಾವಳಿ ಭಾಗದಲ್ಲಿ ಇಂದಿಗೂ ನಮ್ಮ ಸೇವೆ ಅಪಾರವಾಗಿದೆ. ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನ ಸಂಪರ್ಕ, ಕಾರ್ಯಕರ್ತರ ನಡುವೆ ಸಂಬಂಧಗಳು ಇಂದಿಗೂ ನನ್ನ ಬೆನ್ನು ತಟ್ಟುತ್ತಿದೆ.
ನನ್ನಂತಹವರಿಗೆ ಟಿಕೇಟು ನೀಡದೆ ವಂಚಿಸಿರುವುದರಿಂದ ಕರಾವಳಿ ಭಾಗದವರು ಅನ್ಯಾಯಕ್ಕೆ ಬೇಸತ್ತು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಯನ್ನಾಗಿ ನಿಲ್ಲಬೇಕೆಂದು ಒತ್ತಡ ಹೇರಿದ್ದರಿಂದ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದೇನೆ. ನಾನು ಗೆಲ್ಲಲು ಮಾತ್ರ ಸ್ಪರ್ಧೆ ಮಾಡಿದ್ದೇನೆ. ಗೆದ್ದ ನಂತರ ಮಾತೃ ಪಕ್ಷ ಬಿಜೆಪಿಗೆ ಹೋಗುತ್ತೇನೆ. ನನ್ನ ಪರವಾಗಿ ಕಾರ್ಯಕರ್ತರು ಅಭಿಮಾನಿಗಳು ಎಲ್ಲಾ ಜಿಲ್ಲೆಗಳಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ನನ್ನ ಬೆಂಬಲಕ್ಕೆ ಮಾಜಿ ಉಪ ಮುಖ್ಯಮಂತ್ರಿ
ಕೆ.ಎಸ್.ಈಶ್ವರಪ್ಪ ರವರ ರಾಷ್ಟ್ರ ಭಕ್ತರ ಬಳಗದ ಕಾರ್ಯಕರ್ತರು ಮತದಾರರು ಬೆಂಬಲಕ್ಕೆ ನಿಂತಿರುವುದು ಆನೆ ಬಲ ಬಂದಂತಾಗಿದೆ.
ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆವ ನನಗೆ ಟಿಕೇಟು ನೀಡದಿದ್ದರೂ ಪರವಾಗಿಲ್ಲ, ಪಕ್ಷದ ನಿಷ್ಟಾವಂತರಾದ ದತ್ತಾತ್ರಿ, ಗಿರೀಶ್ ಪಾಟೀಲ್ ಅವರಿಗಾದರೂ ಟಿಕೇಟು ನೀಡಬಹುದಿತ್ತು. ಬಿಜೆಪಿಯಲ್ಲಿ ಸತ್ಯ ನಿಷ್ಟೆ ಸಿದ್ದಾಂತ ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ನೆನ್ನೆ ಮೊನ್ನೆ ಬಂದ ಉಳ್ಳವರಿಗೆ, ಜಾತೀಯತೆ ತೋರುವವರಿಗೆ ಮಣೆ ಹಾಕಲಾಗು ತ್ತಿದೆ. ಇದೇ ಸ್ಥಿತಿ ಹೀಗೆ ಮುಂದುವರೆ ದರೆ ಕೊನೆಗೆ ಬಿಜೆಪಿಯಲ್ಲಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ, ರಘುಪತಿ ಭಟ್, ಸಿ.ಟಿ.ರವಿ, ಪ್ರತಾಪಸಿಂಹ ನಾವೇ ಉಳಿಯ ಬೇಕಾಗುತ್ತದೆ ಎಂದರು.
ಅಪಾರ ಸಮಸ್ಯೆಗಳಿರುವ ಪದವೀಧರರ ಕ್ಷೇತ್ರದಲ್ಲಿ ಗೆದ್ದು ಪದವೀಧರರ ಧ್ವನಿಯಾಗಿ ನಿಂತು ಕೆಲಸ ಮಾಡುತ್ತೇನೆ. ಕರಾವಳಿಯಲ್ಲಿ ಯಶಸ್ಸು ಸಾಧಿಸುವ ನಮಗೆ ಶಿವಮೊಗ್ಗ, ಹೊನ್ನಾಳಿ, ಹೊಳೆ ಹೊನ್ನೂರು, ಚನ್ನಗಿರಿ, ಭದ್ರಾವತಿ ಸೇರಿದಂತೆ ಎಲ್ಲೆಡೆ ವ್ಯಾಪಕ ಬೆಂಬಲ ದೊರೆತಿದೆ. ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳೂ ಸಹ ನನಗೆ ಪ್ರತಿಸ್ಪರ್ಧಿ ಗಳೇ ಆಗಿದ್ದರೂ ನಮಗೆ ಗೆಲ್ಲುವ ನಂಬಿಕೆಯೂ ಬಂದಿದೆ. ಅಲ್ಪಕಾಲದಲ್ಲಿ ಎಲ್ಲರನ್ನು ಭೇಟಿಯಾಗಲು ಆಗದಿರುವುದರಿಂದ ಎಲ್ಲಾ ಪದವೀಧರರು ಪ್ರಥಮ ಪ್ರಾಶಸ್ತ್ರದ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾ ಗೋಷ್ಟಿಯಲ್ಲಿ ರಾಷ್ಟ್ರ ಭಕ್ತರ ಬಳಗದ ನಾರಾಯಣಪ್ಪ, ಮಂಜುನಾಥರಾವ್, ಕಲ್ಯಾಳ್ ಮಂಜುನಾಥ್, ಮಲ್ಲೇಶಪ್ಪ, ರಾಜಾಮಣಿ, ರಂಗೋಜಿರಾವ್, ವಸಂತ್, ವೇಲು, ಅನಂತರಾಮ್, ನಾಗಣ್ಣ, ನರಸಿಂಹಾಚಾರ್, ಉಡುಪ, ವಾದಿರಾಜ್, ವಿಜಯ್ ಇದ್ದರು.