ಲಂಚ ಪಡೆಯುವಾಗಲೇ ಲೋಕಾಬಲೆಗೆ

ವಿಜಯ ಸಂಘರ್ಷ 
ಶಿವಮೊಗ್ಗ: ಜಮೀನಿಗೆ ಸಂಬಂಧಿಸಿದ ಖಾತೆ ಮಾಡಿಕೊಡುವ ಸಂಬಂಧ ಆರು ಸಾವಿರ ರೂಪಾಯಿ ಲಂಚ ಕೇಳಿ ಪಡೆಯುತ್ತಿರುವಾಗ ಶಿವಮೊಗ್ಗ ತಾಲೂಕು ಕಸಬಾ ಹೋಬಳಿ, ಗಾಡಿಕೊಪ್ಪ ವೃತ್ತ, ಗ್ರಾಮ ಆಡಳಿತ ಅಧಿಕಾರಿ ಸುರೇಶ್.ಜಿ ಎಂಬುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ನಗರದ ಕೃಷಿನಗರ ವಾಸಿ ಸಂಕೇತ್ ಎಂಬುವವರು ಖರೀದಿಸಿದ ಜಮೀನನ್ನು ತನ್ನ ತಾಯಿ ವೀಣಾ ಬಿ.ಎಂ.ಎಂಬುವವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು.

ವಿನೋಬನಗರ ಪ್ರೀಡಂ ಪಾರ್ಕ್‌ನಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಹೋಗಿ ವಿ ಎ ಆಗಿರುವ ಸುರೇಶ್ ಜಿ.ಬಳಿ ತಾವು ಖರೀದಿಸಿದ ಜಮೀನನ್ನು ಖಾತೆ ಮಾಡಿ ಕೊಡುವಂತೆ ಕೇಳಿಕೊಂಡಾಗ ಕೆಲಸ ಮಾಡಿ ಕೊಡಲು ರೂ. 6000/-ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ನಿರೀಕ್ಷಕ ವೀರಬಸಪ್ಪ ಎಲ್ ಕುಸಲಾಪುರ ನೇತೃತ್ವದಲ್ಲಿ ಲೋಕಾಯುಕ್ತ ಪೋಲಿಸ್ ಅಧೀಕ್ಷಕ ಮಂಜುನಾಥ್ ಚೌಧರಿ ಎಂ.ಹೆಚ್. ಮತ್ತು ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕರ ಮಾರ್ಗದರ್ಶನ ದಲ್ಲಿ ಸಿಬ್ಬಂದಿ ಗಳಾದ ವಿ.ಎ. ಮಹಂತೇಶ ಸಿ.ಹೆಚ್.ಸಿ. ಯೋಗೇಶ್ ಸಿ.ಹೆಚ್ .ಸಿ. ಸುರೇಂದ್ರ ಹೆಚ್.ಜಿ., ಸಿ.ಹೆಚ್.ಸಿ. ಬಿ.ಟಿ.ಚನ್ನೇರ್ತ ಸಿ.ಪಿ ಸಿ., ಪ್ರಶಾಂತ್ ಕುಮಾಯಿ ಸಿಪಿಸಿ, ರಘುನಾಯ್ಕ ಸಿ.ಪಿ.ಸಿ. ದೇವರಾಜ್ ಸಿ.ಪಿ.ಸಿ,ಗಂಗಾಧರ ಎ.ಪಿ ಸಿ, ಪ್ರದೀಪ್ ಎ.ಪಿ.ಸಿ. ಗೋಪಿ ವಿ.ಎ.ಪಿ.ಸಿ., ಹಾಗು ಜಯಂತ್ ಎ.ಪಿ.ಸಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಲಂಚ ಪಡೆಯುವಾಗಲೇ ಹಿಡಿದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು