ಪ್ರಜ್ವಲ್ ರೇವಣ್ಣನವರನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ

ವಿಜಯ ಸಂಘರ್ಷ 
ಶಿವಮೊಗ್ಗ: ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣವು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆ ಘಟನೆಯಾಗಿರುವುದರಿಂದ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ಜಿಲ್ಲಾಧಿಕಾರಿಗಳ ಮೂಲಕ ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಹಾಗೂ ಮುಖ್ಯಮಂತ್ರಿ ಗಳು ಹಾಗೂ ಮುಖ್ಯ ಕಾರ್ಯದರ್ಶಿ ಗಳವರಿಗೆ ಪ್ರತ್ಯೇಕ ದೂರು ನೀಡಿತ್ತು.

 ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ನೀಡಿದ ಮನವಿಯಲ್ಲಿ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನವರನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಈ ಪ್ರಕರಣ ದಲ್ಲಿರುವ ನೂರಾರು ಸಂತ್ರಸ್ಥೆಯರಿಗೆ ಸೂಕ್ತ ಪೊಲೀಸ್, ಸಾಮಾಜಿಕ ಭದ್ರತೆ ನೀಡಬೇಕು, ಮೊಬೈಲ್‌ನಲ್ಲಿದ್ದ 2800 ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ತುಣುಕುಗಳನ್ನು ರಾತ್ರೋರಾತ್ರಿ ಸಾವಿರಾರು ಪೆನ್ ಡ್ರೈವ್‌ ನಲ್ಲಿ ಡೌನ್‌ಲೋಡ್ ಮಾಡಿ ಹಂಚಿಕೆ ಮಾಡಿರುವ ಕಿಡಿಗೇಡಿಗಳ ಮೇಲೆ ಕಾನೂನು ರಿತ್ಯಾ ಪ್ರಕರಣ ದಾಖಲಿಸಿ ತನಿಖಿಸಬೇಕು ಎಂದು ಆಗ್ರಹಿಸಿದೆ.

ಈ ಪ್ರಕರಣದ ಸುದ್ದಿಯನ್ನು ಟಿಆರ್‌ಪಿ ಗಾಗಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಯಥಾವತ್ತಾಗಿ ಬಿತ್ತರಿಸುತ್ತಿರುವ ಸುದ್ದಿವಾಹಿನಿ, ಸಾಮಾಜಿಕ ಜಾಲತಾಣಗಳ ಮೇಲೆ ಕಡಿವಾಣವಾಕ ಬೇಕು, ಇದೊಂದು ಮಹಿಳಾ ಗೌರವ ಪ್ರಧಾನವಾದ ದೇಶದಲ್ಲಿ ಮೊಟ್ಟ ಮೊದಲನೆ ಭಾರಿಗೆ ಮಹಿಳೆಯರನ್ನು ಈ ರೀತಿಯಾಗಿ ತನ್ನ ಕಾಮತೃಷೆಗೆ ಬಳಸಿ ಕೊಂಡ ಪ್ರಕರಣವಾಗಿದ್ದು ಯಾವ ಉದ್ದೇಶಕ್ಕಾಗಿ ಇದನ್ನು ಚಿತ್ರಿಕರಿಸಿ ಕೊಂಡಿದ್ದರು ಎನ್ನುವುದರ ಬಗ್ಗೆಯ ಸೂಕ್ತ ತನಿಖೆಗೊಳ ಪಡಿಸಬೇಕು, 2023 ರ ಸಾಲಿನಿಂದಲೂ ಈ ಪ್ರಕರಣದ ಬಗ್ಗೆ ನಾಗರೀಕ ವಲಯದಲ್ಲಿ ಸುದ್ದಿಗಳಿದ್ದರು ಹಾಸನದ ಜಿಲ್ಲಾ ರಕ್ಷಣಾಧಿಕಾರಿಗಳವರು ತಾತ್ಸಾರತೆ ಹೊಂದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿರುವುದ ರಿಂದ ಇವರನ್ನು ಕೂಡ ಈ ಪ್ರಕರಣದಲ್ಲಿ ತನಿಖಿಸಬೇಕು, ಇದೊಂದು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆಯಾಗಿರುವುದರಿಂದ ಇದನ್ನು ಗಂಭೀರತೆಯಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಖುದ್ದು ಮಾನವ ಹಕ್ಕುಗಳ ಆಯೋಗ ಕೇಸು ದಾಖಲಿಸಿಕೊಳ್ಳಬೇಕು ಹಾಗೂ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಪ್ರಕರಣ ವನ್ನು ದಾಖಲಿಸಿಕೊಂಡು ತನಿಖೆ ನಡೆಸಲು ಆದೇಶಿಸಬೇಕೆಂದು ತಿಳಿಸಿದೆ.

ಈ ಸಂದರ್ಭದಲ್ಲಿ ಅಧ್ಯಕ್ಷ ಜ್ಯೋತಿ ಅರಳಪ್ಪ, ಗೌರವ ಅಧ್ಯಕ್ಷ ಮುಕ್ತಿಯಾರ್ ಅಹ್ಮದ್, ಉಪಾಧ್ಯಕ್ಷ ಕೆ.ಎಸ್.ಶಶಿ, ಪ್ರಧಾನ ಕಾರ್ಯದರ್ಶಿ ಗಾ.ರಾ.ಶ್ರೀನಿವಾಸ್, ಸಹ ಕಾರ್ಯದರ್ಶಿ ಚಿರಂಜೀವಿ ಬಾಬು ಹಾಗೂ ನಿರ್ಧೇಶಕರು ಗಳಾದ ಸ್ವಪ್ನ ಸಂತೋಷ್ ಗೌಡ, ಮಮತಾ ಶಿವಣ್ಣ, ರುದ್ರೇಶ್ ಯಾದವ್, ಪರಮೇಶ್ವರ್, ಎಲ್,ಕೆ, ಚಂದ್ರಹಾಸ್ ಎನ್ ರಾಯ್ಕರ್, ಅನೀಲ್ ಕುಮಾರ್‌ ರವರುಗಳು ಉಪಸ್ಥಿತರಿದ್ದರು.

ಮನವಿ ಸಂಕ್ಷಿಪ್ತತೆಯ ವಿವರಣೆ : 

ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣವು ಮಹಿಳಾ ಪ್ರಧಾನ ರಾಷ್ಟ್ರಕ್ಕೆ ಮಾರಕವಾಗಿದ್ದು ಇದೊಂದು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆಯಾಗಿರುವುದು ಪ್ರಾಥಮಿಕ ಹಂತದಲ್ಲಿ ಧೃಡಪಟ್ಟಿದೆ, 2800 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕುಗಳನ್ನು ತನ್ನ ಮೊಬೈಲ್‌ನಲ್ಲಿಯೇ ಚಿತ್ರಿಕರಿಸಿಕೊಂಡಿದ್ದ ಎನ್ನಲಾದ ಈ ಸಂಗತಿಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರು ಯಾವ ಉದ್ದೇಶಕ್ಕಾಗಿ ಚಿತ್ರಿಕರಿಸಿಕೊಂಡಿದ್ದರು ಎನ್ನುವುದು ಗೊತ್ತು ಮಾಡಿಕೊಳ್ಳಬೇಕಿದೆ, ಕೇವಲ ತನ್ನ ಕಾಮತೃಷೆಗಾಗಿ ಚಿತ್ರಿಕರಿಸಿಕೊಂಡಿದ್ದರೆ..? ಅಥವಾ ಬ್ಲಾಕ್‌ಮೇಲ್ ಮಾಡುವುದಕ್ಕಾಗಿ ಚಿತ್ರಿಕರಿಸಿಕೊಂಡಿದ್ದರೇ..?! ಸೆಕ್ಸ್ ಬಾಂಬರ್ ಯೋಜನೆ ಸಿದ್ದಪಡಿಸಿ ಈ ಮೂಲಕ ಸರಕಾರಿ ಕೆಲಸಗಳನ್ನು ದುರುಪಯೋಗಪಡಿಸಿಕೊಳ್ಳಲು ಇದನ್ನು ಬಳಸಿಕೊಂಡಿದ್ದಾರೆಯೇ..? 2023 ರ ಸಾಲಿನಿಂದಲೂ ಈ ಪ್ರಕರಣದ ಬಗ್ಗೆ ಒಂದಿಷ್ಟು ಚರ್ಚೆ ಗ್ರಾಸವಾಗಿದ್ದರು ಹಾಸನದ ಗುಪ್ತದಳ ಅಗತ್ಯ ಮಾಹಿತಿ ಯನ್ನು ರವಾನಿಸಲು ವೈಪಲ್ಯಗೊಂಡಿತ್ತೇ.? ಅಥವಾ ಮಾಹಿತಿ ಇದ್ದರು ಹಾಸನದ ಜಿಲ್ಲಾರಕ್ಷಣಾಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ತಾತ್ಸಾರತೆ ಹೊಂದಿದ್ದು ಯಾವ ಕಾರಣಕ್ಕಾಗಿ ಎನ್ನುವುದು ತಾವುಗಳು ಕೇಸು ದಾಖಲಿಸಿಕೊಂಡು ತನಿಖಿಸಬೇಕೆಂದು ಈ ಮೂಲಕ ತಮ್ಮ ಆವಗಾಹನೆಗೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಘಟನೆಯು ತರಬಯಸುತ್ತದೆ ಎಂದು ತಿಳಿಸಿದೆ

ಲೋಕಸಭಾ ಚುನಾವಣೆಯ ಈ ಹೊತ್ತಿ ನಲ್ಲಿ ಪ್ರಜಾಪ್ರಭುತ್ವದ ಹಕ್ಕು ಪ್ರಧಾನತೆಯ ಸಂದರ್ಭದಲ್ಲಿಯೇ ಇದು ಬಹಿರಂಗ ವಾಗಲು ಕಾರಣವೇನು ಎನ್ನುವುದನ್ನು ಪತ್ತೆಹಚ್ಚಲು ಆಗ್ರಹಿಸುತ್ತದೆ, ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರು ಮನೆ ಕೆಲಸದವರಿಂದ ಹಿಡಿದು ನಿರೂಪಕಿ, ಪೊಲೀಸ್ ಅಧಿಕಾರಿ ಗಳು, ವಿವಿಧ ಸರಕಾರಿ, ಅರೆ ಸರಕಾರಿ ನೌಕರಿಯಲ್ಲಿ ರುವವರನ್ನು, ಸಂಘಟನೆ, ರಾಜಕೀಯ ದಲ್ಲಿ ಮುಂಚೂಣಿಯಲ್ಲಿದ್ದವರು ಹಾಗೂ ಮಾಡಲಿಂಗ್, ಕಿರುತೆರೆ, ಸಿನಿಮಾ ನಟಿಯರನ್ನು ಬಿಡದೆ ತನ್ನ ಕಾಮತೃಷೆಗೆ ಒತ್ತಾಯಪೂರ್ವಕವಾಗಿಯೋ, ಬಲತ್ಕರಿಸಿಯೋ, ಬ್ಲಾಕ್‌ಮೇಲ್ ಮಾಡಿಯೋ, ನೂರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಸೆಳೆದುಕೊಂಡು ೨೮೦೦ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕುಗಳನ್ನು ತನ್ನ ಮೊಬೈಲ್‌ನಲ್ಲಿಯೇ ಚಿತ್ರಿಕರಿಸಿಕೊಂಡಿದ್ದು ನಾಗರೀಕ ಹಾಗೂ ಮನುಷ್ಯ ಬದುಕಿನ ಮಾರಕವಾಗಿದ್ದು ಇದೊಂದು ಅನಾಹುತಕಾರಿ ಘಟನೆಯಾಗಿ ರುವುದರಿಂದ ಇದೀಗ ತನಿಖೆ ನಡೆಸುತ್ತಿರುವ ಎಸ್‌ಐಟಿಯ ಜೊತೆಯಲ್ಲಿ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಪೊಲೀಸ್ ನಿರ್ದೇಶಕರು ಕೂಡ ಪ್ರತ್ಯೇಕವಾಗಿ ತನಿಖಿಸಬೇಕೆಂದು ಸಂಘಟನೆ ಈ ದೂರು ನೀಡುತ್ತದೆ ಎಂದು ಹೇಳಿದೆ.

ಮೊಬೈಲ್‌ನಲ್ಲಿದ್ದ ಈ 2800 ಕ್ಕೂ ಅಶ್ಲೀಲ ವೀಡಿಯೋ ತುಣುಕುಗಳನ್ನು ಸಾವಿರಾರು ಪೆನ್‌ಡ್ರೈವ್‌ಗಳಿಗೆ ಡೌನ್‌ಲೋಡ್ ಮಾಡಿ ಹಂಚಿಕೆ ಮಾಡಿರುವುದು, ಹಾಗೂ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಿಸಿ ರುವುದು ನಾಗರೀಕ ಸಮಾಜಕ್ಕೆ ತರವಲ್ಲ ವಾಗಿರುವು ದರಿಂದ ಅಶ್ಲೀಲ ವೀಡಿಯೋ ಗಳನ್ನು ಸೆರೆ ಹಿಡಿದವರು ಹಾಗೂ ವಿಕೃತ ವಾಗಿ ಮಹಿಳೆಯರನ್ನು ನಡೆಸಿ ಕೊಂಡವರು ಎಷ್ಟು ಅಪರಾಧಿಗಳೋ.. ಹಂಚಿಕೆ ಹಾಗೂ ಸುದ್ದಿ ಬಿತ್ತರಿಸುವುದು ಕೂಡ ಅಷ್ಟೆ ಅಪರಾಧ ವಾಗಿರುವುದ ರಿಂದ ಇಂತಿವರುಗಳ ಮೇಲೂ ಕಾನೂನು ಕ್ರಮ ಜರುಗಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಘಟನೆಯು ಒತ್ತಾಯಿಸುತ್ತದೆ ಎಂದು ವಿವರಿಸಿದೆ.

ಇದೊಂದು ದೈಹಿಕ ಹಿಂಸೆ ಪ್ರಧಾನವಾದ ಪ್ರಕರಣ ಮಾತ್ರವಲ್ಲ, ಮಾನಸಿಕ ಅತ್ಯಾಚಾರವು ಹೌದಾಗಿದೆ ಹಾಗೂ ರಾಷ್ಟ್ರದಲ್ಲಿಯೆ ಮೊಟ್ಟ ಮೊದಲನೆ ಪ್ರಕರಣ ಇದಾಗಿದ್ದು ಈ ಮೇಲೆ ಹೇಳಿರುವಂತೆ ಮನುಷ್ಯ ಬದುಕಿನ ಮೇಲಿನ ವಿಕೃತ ಸೆಕ್ಸ್ ಭಯೋತ್ಪಾದನೆ ಯಾಗಿರುವುದು ಈ ಅಂಶಗಳಿಂದ ಧೃಡಪಡುವುದರಿಂದ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರತ್ಯೇಕ ದೂರು ದಾಖಲಿಸಿಕೊಂಡು ತನಿಖಾ ತಂಡ ರಚಿಸುವಂತೆ ಈ ಮೂಲಕ ಸಂಘಟನೆ ಆಗ್ರಹಿಸಿದೆ.

ಯಾವುದೇ ವಿಚಾರಣೆಗಳಾಗಲಿ, ತನಿಖೆಗಳಾಗಲಿ ಈ ಪ್ರಕರಣದಲ್ಲಿರುವ ಸಂತ್ರಸ್ಥೆಯರ ಹೆಸರು ಹಾಗೂ ಪರಿಚಯ ಗಳನ್ನು ಗೌಪ್ಯವಾಗಿಡಬೇಕು, ಹಾಗೂ ಅವರಿಗೆ ಕಾನೂನು ಹಾಗೂ ಸಾಮಾಜಿಕ ಭದ್ರತೆ ನೀಡಬೇಕು ಎಂದು ಈ ಮೂಲಕ ಸಂಘಟನೆ ತಿಳಿಸುತ್ತದೆ ಎಂದು ಹೇಳಿದೆ.

ಈ ಪ್ರಕರಣವು ಬಹುದೊಡ್ಡ ಸೆಕ್ಸ್ ಬಾಂಬರ್ ಸ್ಪೋಟವಾಗಿರುವುದರಿಂದ ಇದರ ರೂವಾರಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರನ್ನು ಹಾಗೂ ಇದಕ್ಕೆ ಬೆಂಬಲಿಸಿದವರನ್ನು ಬಂಧಿಸಿ ವಿಚಾರಣೆ ನಡೆಸಿ ಭಾರತೀಯ ದಂಡ ಸಂಹಿತೆ ರಿತ್ಯಾ ಪ್ರಕರಣ ದಾಖಲಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಈ ದೂರು ಪ್ರತಿಯನ್ನು ಘಟನೆಯನ್ನು ಆಧರಿಸಿ ತಮ್ಮ ಇಲಾಖೆಗಳಿಗೆ ಸಲ್ಲಿಸುತ್ತಿದೆ ಎಂದು ವಿವರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು