ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಸಮೀಪದ ಭದ್ರಾ ಕಾಲೋನಿ ಲಕ್ಷ್ಮೀಪುರದ ಚಾನಲ್‌ನಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮೃತದೇಹವನ್ನ ಪ್ಲಾಸ್ಟಿಕ್ ನಲ್ಲಿ ಬಿಗಿದು ಚಾನೆಲ್ ಗೆ ಎಸದಿರುವುದಾಗಿ ತಿಳಿದು ಬಂದಿದೆ.
ಚಾನಲ್ ದಂಡೆಯ ಮೇಲೆ ಬೈಕ್ ನಿಲ್ಲಿಸಲಾಗಿದೆ. ಬೈಕ್ ಸಹ ಮೃತನಿಗೆ ಸೇರಿದ್ದು ಎನ್ನಲಾಗಿದೆ. ಮೃತರು ಕೇಶವಪುರ ಬಡಾವಣೆಯ ವಾಸಿ, ಯುಪಿಎಸ್ ದುರಸ್ತಿಗಾರ ಲೋಕೇಶ (37)ಎಂದು ಗುರುತಿಸಲಾಗಿದೆ.
ಸ್ಥಳೀಯರು ಚಾನಲ್ ಬಳಿ ಬಿದ್ದಿರುವ ದ್ವಿಚಕ್ರ ವಾಹನ ಮತ್ತು ಚಾನಲ್‌ನಲ್ಲಿ ಶವ ಬಿದ್ದಿರುವುದು ಕಂಡು ತಕ್ಷಣವೇ ಪೊಲೀಸರಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಸಾಗಿಸಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ಸಾವು ಹಲವು ಅನುಮಾನದಿಂದ ಕೂಡಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.