ವಿಜಯ ಸಂಘರ್ಷ
ಕೂಡ್ಲಿಗಿ: ಪಟ್ಟಣ ಪಂಚಾಯ್ತಿಯಿಂದ 2020-21ನೇ ಸಾಲಿನ ವಸತಿ ಯೋಜನೆಯ ಪ್ರಕ್ರಿಯೆಯನ್ನು ಧಾರವಾಡ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ ಎಂದು ಸಾಮಾಜಿಕ ಹೋರಾಟಗಾರ ಗುನ್ನಳ್ಳಿ ರಾಘವೇಂದ್ರ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ, ವಸತಿ ಹಂಚಿಕೆ ಪ್ರಕ್ರಿಯೆ ರದ್ದುಮಾಡುವಂತೆ ಕೋರಿ, ತಾವು ನ್ಯಾಯಾಲಯದ ಮೊರೆ ಹೋಗಿರುವುದಾಗಿ ತಿಳಿಸಿದರು.
ವಸತಿ ಹಂಚಿಕೆಯಲ್ಲಾಗಿರುವ ಭಾರೀ ಪ್ರಮಾಣದ ವ್ಯತ್ಯಾಸವನ್ನು ಹಾಗೂ ಲೋಪ ದೋಷಗಳನ್ನು ಸರಿಪಡಿಸುವಂತೆ ಸಂಘಟನೆಯ ನೇತೃತ್ವದಲ್ಲಿ ತಾವು ನಿರ್ಗತಿಕರ ಪಟ್ಟಿ ತಯಾರಿಸಿ, ಅರ್ಹರಿಗೆ ಮನೆ ಕಲ್ಪಿಸು ವಂತೆ ಹಿಂದಿನ ಶಾಸಕ ಎನ್.ವೈ. ಗೋಪಾಲ ಕೃಷ್ಣ ರವರ ಮುಖೇನ, ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗೆ ನೀಡಲಾಗಿತ್ತು. ಆದರೆ ಪಟ್ಟಿಯನ್ನು ತಿರಸ್ಕರಿಸಲಾಗಿದ್ದು, ಪಪಂ ಜನಪ್ರತಿನಿಧಿಗಳೇ ಪಲಾನುಭವಿಗಳ ಪಟ್ಟಿಯನ್ನು ಇಲಾಖೆಗೆ ನೀಡಿದ್ದು. ಹಾಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಅರ್ಹರೇ ಹೆಚ್ಚಿರುವ ಪಟ್ಟಿಯನ್ನು ಫೆ:2024ರಲ್ಲಿ ಅನುಮೋದಿಸಿದ್ದಾರೆ. ಆ ಪಟ್ಟಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ಸಕಲ ಸೌಕರ್ಯ ಯುಳ್ಳವರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿದರು.
ಪಟ್ಟಿಯಲ್ಲಿ, ಶೇಕಡ 50ಕ್ಕೂ ಹೆಚ್ಚು ಅನರ್ಹರು ಪತ್ತೆಯಾಗಿದ್ದಾರೆ. ಮನೆ ಹಂಚಿಕೆ ಯಲ್ಲಿ ಅನರ್ಹರಿಗೆ ಮಣೇ ಹಾಕಲಾಗಿರು ವುದು ಸ್ಪಷ್ಟವಾಗಿದ್ದು, ಭಾರೀ ಭ್ರಹ್ಮಾಂಡ ಭ್ರಷ್ಟಾಚಾರ ಜರುಗಿರುವ ಗುಮಾನಿ ಹರಡಿದೆ. ಸೂರಿಲ್ಲದ ನೂರಾರು ನಿರಾಶ್ರಿತರು ನಿರಾಶ್ರಿತರಾಗೇ ಇದ್ದಾರೆ, ಮಾಜಿ ದೇವಸಿಯರ ಮಕ್ಕಳು, ವಿಧವೆಯರು, ಹತ್ತಾರು ವಿಕಲ ಚೇತನರು, ನಿರಾಶ್ರಿತರು, ಗೇಣು ಸೂರಿಲ್ಲದೇ ಮಳೆ ಬಿಸಿಲಿಗೆ ಮೈ ವಡ್ಡಿ ಬಯಲಲ್ಲಿ ಬದುಕುತ್ತಿದ್ದಾರೆ. ಹಲವು ಕುಟುಂಬಗಳು ಜೀವನ ಪೂರ್ತಿ ಬಾಡಿಗೆ ಮನೆ , ಅಥವಾ ಬಯಲೇ ತಮ್ಮ ಆಶ್ರಯ ತಾಣವನ್ನಾಗಿಸಿ ಕೊಂಡಿವೆ. ಚಿೋಪಡಿಯಲ್ಲಿ ಗರಿ ಮನೆಗಳಲ್ಲಿ ತಗಡಿನ ಗೂಡಲ್ಲಿ ವಾಸಿಸುತ್ತಿದ್ದಾರೆ, ಅಂತಹ ಅನರ್ಹರಿಗೆ ವಸತಿ ಸೌಕರ್ಯ ದೊರೆಯ ಬೇಕಿದೆ. ಅನರ್ಹರಿಗೆ ಯಾವುದೇ ಕಾರಣಕ್ಕೆ ವಸತಿ ಸೌಲಭ್ಯ ದೊರಕಬಾರದು, ನಿಜವಾದ ನಿರ್ಗತಿಕರಿಗೆ ಬಡವರಿಗೆ, ದೀನ ದಲಿತರಿಗೆ ಕಾರ್ಮಿಕರಿಗೆ ರೈತರಿಗೆ ನೊಂದ ಬಡ ದುರ್ಭಲರಿಗೆ ನಿರಾಶ್ರಿತ ಮಹಿಳೆಯರಿಗೆ ವಸತಿ ಸೌಕರ್ಯ ದೊರಕಬೇಕಿದೆ. ಅದಕ್ಕಾಗಿ ಸಂಘಟನೆಯಿಂದ ಕಾನೂನಿನ ಮೂಲಕ ಹೋರಾಟ ನಿರಂತರ ಸಾಗಲಿದೆ,
ಅನ್ಯಾಯ ಜರುಗುವುದಕ್ಕೆ ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ನ್ಯಾಯಯುತ ಹೋರಾಟದಲ್ಲಿ ತಾವು ಹಾಗೂ ಸಂಘಟನೆ, ಎಂದಿಗೂ ರಾಜಿಯಾಗುವುದಿಲ್ಲ. ಅನ್ಯಾಯ ಅಕ್ರಮ ಅವ್ಯವಸ್ಥೆ ಸರಿಪಡಿಸುವವರೆಗೆ ಮತ್ತು ಅರ್ಹರಿಗೆ ವಸತಿ ಸೌಕರ್ಯ ದೊರಕು ವರೆಗೂ, ಸಂಘಟನೆಯಿಂದ ಹೋರಾಟ ನಿಲ್ಲದು ಎಂದು ಗುನ್ನಳ್ಳಿ ರಾಘವೇಂದ್ರ ತಿಳಿಸಿದರು.
ಕಾರ್ಮಿಕ ಮುಖಂಡರಾದ ಬಿ.ಟಿ.ಗುದ್ದಿ ಚಂದ್ರು, ಬೊಮ್ಮಘಟ್ಟ ಪಂಪಾಪತಿ ಮಾತನಾಡಿದರು. ಸಮಾಜವಾದಿ ಮಹಿಳಾ ಸಂಘಟನೆಯ ಭಾಗ್ಯಮ್ಮ, CITU ಮುಖಂಡರಾದ ಕರಿಯಣ್ಣ, ನಭಿಸಾಹೇಬ್ ಸೇರಿದಂತೆ ಮತ್ತಿತ್ತರರು ಇದ್ದರು.
(✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ)
Tags:
ವಿಜಯ ನಗರ ಕೂಡ್ಲಿಗಿ ಸುದ್ದಿ