ಸಾಗರ: ಆಸ್ಪತ್ರೆಗೆ ಶಾಸಕ ಬೇಳೂರು ದಿಢೀ‌ರ್ ಭೇಟಿ- ಪರಿಶೀಲನೆ

ವಿಜಯ ಸಂಘರ್ಷ 
ಸಾಗರ: ನಗರದ ಉಪವಿಭಾಗೀಯ ಆಸ್ಪತ್ರೆಗೆ ಶಾಸಕ ಬೇಳೂರು ಗೋಪಾಲ ಕೃಷ್ಣ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ವಾರ್ಡ್‌ಗೆ ತೆರಳಿ ರೋಗಿ ಗಳು, ಅವರ ಸಂಬಂಧಿ ಜೊತೆಗೆ ಮಾತನಾಡಿದರು. ಬಳಿಕ ವೈದ್ಯರು ಮತ್ತು ಸಿಬ್ಬಂದಿ ಹಾಜರಾತಿ ಪರಿಶೀಲಿಸಿ ತರಾಟೆಗೆ ತೆಗೆದುಕೊಂಡರು.

ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆಲವು ವೈದ್ಯರು ಬೆಳಗ್ಗೆ 11 ಗಂಟೆಯಾದರೂ ಕರ್ತವ್ಯಕ್ಕೆ ಹಾಜರಾಗದ ಕುರಿತು ನನ್ನ ಗಮನಕ್ಕೆ ಬಂದಿದೆ. ಅಂತಹ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇದು ಪುನರಾವರ್ತನೆಯಾದರೆ ಅಮಾನತು
ಮಾಡಲಾಗುತ್ತದೆಂದು ಎಚ್ಚರಿಸಿದರು. 

ಡೆಂಗಿ ಪ್ರಕರಣಗಳು ಹೆಚ್ಚಾಗಿವೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಿತ್ಯ 20 ರಿಂದ 30 ಪ್ರಕರಣಗಳು ವರದಿ ಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು. ಉತ್ತಮ ಚಿಕಿತ್ಸೆ ಕಾರಣಕ್ಕೆ ಶಿಕಾರಿಪುರ, ಸೊರಬ ಸೇರಿ ಸುತ್ತ ಮುತ್ತಲ ತಾಲ್ಲೂಕಿನ ಜನರು ಇಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಆದ್ದರಿಂದ ವೈದ್ಯರ ಮೇಲೆ ಒತ್ತಡವಿದೆ ಎಂದು ತಿಳಿಸಿದರು.

ಸಿವಿಲ್ ಸರ್ಜನ್ ಡಾ. ಕೆ.ಪರಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ, ತಾರಾಮೂರ್ತಿ, ಅಶೋಕ್ ಬೇಳೂರು, ರವಿಕುಮಾ‌ರ್ ಇದ್ದರು.

1 ಕಾಮೆಂಟ್‌ಗಳು

ನವೀನ ಹಳೆಯದು