ಜೀವಂತ ಮನುಷ್ಯ ದಾನ ಮಾಡಬಹುದಾದ ಏಕೈಕ ಅಂಗ "ರಕ್ತ" ಮಾತ್ರ

ವಿಜಯ ಸಂಘರ್ಷ 
ಭದ್ರಾವತಿ: ಮನುಷ್ಯ ತಾನು ಬದುಕಿರು ವಾಗಲೇ ದಾನ ಮಾಡಬಹುದಾದ ಏಕೈಕ ಅಗ ಎಂದರೆ ಅದು "ರಕ್ತ" ಮಾತ್ರ ಎಂದು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕಿರಣ್ ರಾವ್ ಮೋರೆ ಹೇಳಿದರು.

ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು,

 ಅಫಘಾತ, ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವ ಸಂಬವಿಸುತ್ತದೆ. ಆದ್ದರಿಂದ ಈ ವೇಳೆ ಹೆಚ್ಚಿನ ರಕ್ತದ ಅವಶ್ಯಕತೆ ಇರುತ್ತದೆ. ಆದ ಕಾರಣ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿದರೆ ಇನ್ನೊಂದು ಜೀವವನ್ನು ಉಳಿಸಲು ಸಹಕಾರವಾಗುತ್ತದೆ.ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ರಕ್ತ ಜೀವಂತ ಮನುಷ್ಯರ ದಾನದಿಂದಲೇ ಸಂಗ್ರಹಿಸಬೇಕು ಎಂದರು.

ಶಿಬಿರದಲ್ಲಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಸದ್ಯಸರಾದ ಸುನಿತಾ, ಒಬಳಮ್ಮ, ಕಳ್ಳಿಹಾಳ್ ಪಂಚಾಯತಿ ಅಧ್ಯಕ್ಷೆ ಶಿಲ್ಪಾ ಅರುಣ್, ಸದ್ಯಸರಾದ ನಾಗಲಕ್ಷ್ಮಿ, ಇಮ್ರಾನ್, ಅರಕೆರೆ ಪಂಚಾಯತಿ ಸದ್ಯಸರ ಲಕ್ಷ್ಮಿಪತಿ ಹಾಗೂ ಭದ್ರಾವತಿ ತಾಲೂಕು ಅರೋಗ್ಯ ಅಧಿಕಾರಿ ಡಾ ಅಶೋಕ್, ಪ್ರಾಥಮಿಕ ಆರೋಗ್ಯ ಅಧಿಕಾರಿ ಡಾ ಜಗದೀಶ್, ನಾಗರಾಜ್ ಅರೋಗ್ಯ ರಕ್ಷ ಸಮಿತಿಯ ರಾಮಚಂದ್ರ ರಾವ್, ಗೋರ್ಪಡೆ, ಶ್ರೀನಿವಾಸ ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು