ವಿಜಯ ಸಂಘರ್ಷ
ಭದ್ರಾವತಿ: ಪ್ರಸ್ತುತ ಸಮಾಜದಲ್ಲಿ ಬಾಲ್ಯ ವಿವಾಹ, ಮೂಢನಂಬಿಕೆ. ಅತ್ಯಾಚಾರ ಅಪರಾಧಗಳು ಹೆಚ್ಚಾಗಿ ನಡೆಯುತ್ತಿದ್ದು, ಸಮಾಜದಸ್ವಾಸ್ಥ್ಯ ಹದಗೆಡುತ್ತಿದೆ. ಇವೆಲ್ಲವೂ ಸಮಾಜ ದಿಂದ ದೂರವಾಗಬೇಕಾದರೆ ಶರಣರ ಬದುಕನ್ನು ನಾವೆಲ್ಲರೂ ಅರ್ಥೈಸಿ ಕೊಂಡು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳ ಬೇಕೆಂದು ಎಂದು ಹಿರಿಯ ಸಾಹಿತಿ ಜೆ.ಎನ್. ಬಸವರಾಜಪ್ಪ ಹೇಳಿದರು.
ಅವರು ಸಿದ್ಧಾರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಶಾಶ್ವತಿ ಮಹಿಳಾ ಸಮಾಜದ ಸಹಯೋಗ ದೊಂದಿಗೆ ಆಯೋಜಿಸಲಾಗಿದ್ದ 'ಶ್ರೀಮತಿ ಸರ್ವಮಂಗಳಮ್ಮ ಶ್ರೀ ಶಿವಶಂಕರಯ್ಯ' ದತ್ತಿ ಕಾರ್ಯಕ್ರಮದಲ್ಲಿ 'ಸಾಹಿತ್ಯ ಮತ್ತು ಸಾಮಾಜಿಕನ್ಯಾಯ' ಕುರಿತು ಉಪನ್ಯಾಸ ನೀಡಿದರು.
ಅರಾಜಕತೆಯಿಂದ ಕೂಡಿರುವ ಈ ಸಮಾಜ ದಲ್ಲಿ ಕಲುಷಿತ ಮನಸ್ಸುಗಳಿಗೆ ವಚನ ಸಾಹಿತ್ಯ ದಲ್ಲಿ ಉತ್ತರ ಸಿಗಲಿದೆ. ಹಿನ್ನಲೆಯಲ್ಲಿ ವಚನಗಳನ್ನು ಪ್ರತಿಯೊಬ್ಬರೂ ಓದಲೇಬೇಕಾಗಿದೆ. ಈ ಮೂಲಕ ಶರಣರ ಬದುಕನ್ನು ನಾವೆಲ್ಲರೂ ಅರ್ಥಮಾಡಿಕೊಂಡು ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಎಂದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯದ ಪರಿಚಯ ಮಾಡಿಕೊಡುವ ಮೂಲಕ ವಚನ ಗಾರರು ಹಾಗು ವಚನಗಾರ್ತಿ ಯರ ಗಾಯನಗಳನ್ನು ಹಾಡಿಸುವ ಪರಿಪಾಠ ಬೆಳಸಬೇಕು ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಶಾಶ್ವತಿ ಮಹಿಳಾ ಸಮಾಜ ಕನ್ನಡ ಸಾಹಿತ್ಯ ಪರಿಷತ್ತಿ ನೊಂದಿಗೆ ಕೈ ಜೋಡಿಸಿಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈ ರೀತಿಯ ಕಾರ್ಯಕ್ರಮಗಳು ಶಾಲಾ-ಕಾಲೇಜು ಗಳಲ್ಲಿ ಹೆಚ್ಚಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ದತ್ತಿ ದಾನಿಗಳಾದ ಎಮೆರಿಟಸ್ ಪ್ರೊ:ವಿಜಯದೇವಿ, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷ ಬಿ.ಎಸ್. ರೂಪರಾವ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕೋಡ್ಲುಯಜ್ಞಯ್ಯ, ಕಾರ್ಯದರ್ಶಿಗಳಾದ ಜಗದೀಶ್, ಕೆ.ಎಚ್.ತಿಮ್ಮಪ್ಪ.ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಚನಗಾಯನ ಸ್ಪರ್ಧೆಯಲ್ಲಿ ಉತ್ತಮ ವಾಗಿ ವಚನಗಾಯನ ಮಾಡಿದ ತಂಡ ಗಳಿಗೆ ಬಹುಮಾನ ವಿತರಿಸಲಾಯಿತು.
Tags:
ಭದ್ರಾವತಿ ಕಸಾಪ ಸುದ್ದಿ
ಅಚ್ಚುಕಟ್ಟಾದ ವಿಚಾರಗಳನ್ನು ತಮ್ಮ ವಿಜಯ ಸಂಘರ್ಷದಲ್ಲಿ ಪ್ರಕಟಿಸುವ ಮೂಲಕ ಓದುಗರಿಗೆ ಹತ್ತಿರವಾಗುತ್ತಿದ್ದೀರಿ. ಇದಕ್ಕಾಗಿ ತಮಗೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿJnb ಧನ್ಯವಾದಗಳು.ಧನ್ಯವಾದಗಳು