ವಿಜಯ ಸಂಘರ್ಷ
ಭದ್ರಾವತಿ: ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಜ್ಜನಿಪುರ ಆರೋಗ್ಯ ಕೇಂದ್ರ ವತಿಯಿಂದ ಸಾರ್ವಜನಿಕ ರಿಗೆ ಮಕ್ಕಳಿಂದ ಜಾಗೃತಿ ಜಾಥಾ ನಡೆಸಿ ಕರಪತ್ರಗಳನ್ನು ನೀಡಲಾಯಿತು.
ಆರೋಗ್ಯ ನಿರೀಕ್ಷಣಾಧಿಕಾರಿ ಮನೋಹರ್ ಮಾತನಾಡಿ, ಸೊಳ್ಳೆಗಳನ್ನು ನಿಯಂತ್ರಣ ಮಾಡಿದರೆ ಡೆಂಗ್ಯೂ ಹರಡುವಿಕೆ ತಡೆಗಟ್ಟಬಹುದು, ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮಾಹಿತಿ ನೀಡಿದರು.
ನಗರಸಭಾ ಸದಸ್ಯ ಬಸವರಾಜ್ ಬಿ. ಆನೆಕೊಪ್ಪ, ಉಜ್ಜನಿಪುರ ವೆಂಕಟೇಶ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪಿ ಎಚ್ ಸಿ ಓ ರಮ್ಯಾ,ಮಾರ್ಗರೇಟ್, ಪೂರ್ಣಿಮಾ, ಜಯಶ್ರೀ, ಶಾಲಾ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಇದ್ದರು.