ಎಪಿಎಂಸಿ ಅಧ್ಯಕ್ಷರಾಗಿ ಬಿ.ಟಿ. ನಾಗರಾಜ್ ಆಯ್ಕೆ

ವಿಜಯ ಸಂಘರ್ಷ 
ಭದ್ರಾವತಿ: ನಗರಸಭೆ ಮಾಜಿ ಅಧ್ಯಕ್ಷರಾಗಿ ಹಾಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಟಿ.ನಾಗರಾಜ್ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ರಾಗಿರುವುದು ಹೆಮ್ಮೆಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್‌ ಬಾನು ಹೇಳಿದರು.

ನಗರದ ನೂತನ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ನಂತರ ಅಭಿನಂದಿಸಿ ಅವರು ಮಾತನಾಡಿದರು.

ನಾಗರಾಜ್ ಅವರು ಸಹಕಾರಿ ಕ್ಷೇತ್ರ ದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವುದು ಸಂತಸ ತಂದಿದೆ. ಕೃಷಿ ಮತ್ತು ರೈತರಿಗಿರುವ ಕೆಲವು ಸಮಸ್ಯೆ ಗಳನ್ನು ನಿವಾರಿಸಿ ಈ ಕ್ಷೇತ್ರಕ್ಕೆ ಹೆಸರಾಗಲಿ ಎಂದರು. 

ನೂತನ ಅಧ್ಯಕ್ಷ ಬಿ.ಟಿ.ನಾಗರಾಜ್ ಮಾತನಾಡಿ ನಮ್ಮನ್ನು ಅವಿರೋಧ ವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಸಹಕರಿಸಿದ ಪಕ್ಷದ ಮುಖಂಡರಿಗೂ ಹಾಗೂ ಅಭಿಮಾನಿ ಬಳಗಕ್ಕೂ ಕೃತಜ್ಞತೆ ಸಲ್ಲಿಸಿ ನಮ್ಮ ಅವಧಿಯಲ್ಲಿ ಕೃಷಿಕರ ರೈತರಿಗೆ ಪ್ರಾಮಾಣಿಕ ಸೇವೆ ನೀಡುವುದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ಬಿ.ಕೆ. ಶಿವಕುಮಾ‌ರ್, ರವಿ ಕುಮಾರ್, ಬಸವರಾಜಪ್ಪ, ಹನುಮಂತಪ್ಪ, ನಂಜಪ್ಪ, ಪ್ರಕಾಶ್‌ ರಾವ್, ಬಸಂತಪ್ಪ, ಗಿರಿನಾಯ್ಡು, ಜಹೀರ್‌ಜಾನ್, ಸುರೇಶ್, ಆಬಿದಲಿ, ಲಕ್ಷ್ಮೀದೇವಿ, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಬಿಜೆಪಿ ಮಂಡಲ ಅಧ್ಯಕ್ಷ ಧರ್ಮಪ್ರಸಾದ್ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು