ವಿಜಯ ಸಂಘರ್ಷ
ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಟಿಕೊಪ್ಪಲು ಮತ್ತು ಗಂಜಿಗೆರೆ ಕೊಪ್ಪಲು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನ ಒದಗಿಸದೆ ಗ್ರಾಮದ ಮುಖ್ಯ ಬೀದಿಗಳಿಗೆ ಚರಂಡಿ ಇಲ್ಲದೆ ನಡುರಸ್ತೆಯಲ್ಲಿ ಮಳೆ ನೀರು ನಿಂತು ಗಬ್ಬೆದ್ದು ನಾರುತ್ತಾ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಇತ್ತೀಚಿನ ದಿನದಲ್ಲಿ ಸೊಳ್ಳೆಯಿಂದ ಸಾಂಕ್ರಾಮಿಕ ರೋಗ ಹಾಗೂ ಡೆಂಗ್ಯೂ ಜ್ವರದಿಂದ ಸಾವನ್ನಪ್ಪುತ್ತಿದ್ದರೂ ಅಧಿಕಾರಿ ಗಳು ಗಾಢ ನಿದ್ರೆಯಲ್ಲಿ ಮಲಗಿದ್ದಾರೆ. ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ಇದ್ದು ಪುಟ್ಟ ಮಕ್ಕಳು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ರಸ್ತೆಯ ಇಕ್ಕೇಲ ಗಳಲ್ಲಿ ಮತ್ತು ಮನೆಯ ಮುಂಭಾಗದಲ್ಲಿರುವ ಚರಂಡಿಗಳಲ್ಲಿ ನಿಂತಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆಮಾಡಬೇಕಿದೆ.
ಸರ್ಕಾರದ ವತಿಯಿಂದ ಗ್ರಾಮಕ್ಕೆ ವಿಶೇಷವಾಗಿ ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡಿ ನಿರ್ಮಾಣಗೊಂಡು ವರ್ಷಗಳು ಕಳೆದರು ಅರ್ಧಕ್ಕೆ ನಿಂತಿರುವ ಮೇಜರ್ ವಾಟರ್ ಟ್ಯಾಂಕ್ ಕಾಮಗಾರಿಯು ಕಾರಣವಾಗಿದೆ. ಕಾಮಗಾರಿಯನ್ನು ಪೂರ್ಣ ಮಾಡದೆ ಅರ್ಧಕ್ಕೆ ನಿಲ್ಲಿಸಿರುವ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ನಮ್ಮ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಒಮ್ಮೆ ಭೇಟಿ ನೀಡಿ ಅರ್ಧಕ್ಕೆ ನಿಂತಿರುವ ಮೇಜರ್ ಟ್ಯಾಂಕನ್ನು ಪರಿಶೀಲಿಸಿ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ ಒದಗಿಸಿ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಬರದಂತೆ ಮುಂಜಾಗ್ರತೆ ಕ್ರಮ ವಹಿಸಿ ಗ್ರಾಮದ ಜನರು ರೋಗಮುಕ್ತವಾಗಿ ನೆಮ್ಮದಿ ಜೀವನ ನಡೆಸಲು ಅಧಿಕಾರಿಗಳು ಮುಂದಾಗಬೇಕು.
ಗ್ರಾಮದ ರಸ್ತೆಯಲ್ಲಿ ನೀರು ನಿಲ್ಲಲು ಮುಖ್ಯ ಕಾರಣವೇನೆಂದರೆ ಚರಂಡಿ ಇಲ್ಲ. ಅಂಗನವಾಡಿ ಕೇಂದ್ರ ಮತ್ತು ಶಾಲೆಯ ಪಕ್ಕದಲ್ಲಿ ನೀರು ನಿಂತು ಕೊಳೆತು ಗಬ್ಬೆದ್ದು ನಾರುತಿದ್ದರೂ ಸ್ವಚ್ಛತೆ ಮಾಡದೆ ಅಧಿಕಾರಿ ಗಳು ನಿರ್ಲಕ್ಷ ತೋರುತ್ತಿದ್ದಾರೆ. ತುರ್ತಾಗಿ ಮನೆ ಮನೆಗೆ ನೀರಿನ ವ್ಯವಸ್ಥೆ ಮಾಡಿದರೆ ಇಂತಹ ತೊಂದರೆಯನ್ನು ನಿವಾರಿಸಬಹುದು.
ಸೊಳ್ಳೆಯ ಕಚ್ಚುವಿಕೆಯಿಂದಾಗಿ ಮಕ್ಕಳು ಶೀತ, ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತದೆ ಎಂದು ಮೌಖಿಕವಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಆದರೂ ಸಹ ನಮ್ಮ ಗ್ರಾಮಕ್ಕೆ ಯವುದೇ ಆರೋಗ್ಯಾಧಿಕಾರಿಗಳು ಬೇಟಿ ನೀಡಿ ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಮುಖ್ಯವಾಗಿ ನಮ್ಮ ಗ್ರಾಮದ ಮುಖ್ಯ ರಸ್ತೆಗಳಲ್ಲಿ ನೀರು ನಿಲ್ಲದಂತೆ ಮಾಡಿ ಬ್ಲೀಚಿಂಗ್ ಪೌಡರ್ ಹಾಕಿ ಸೊಳ್ಳೆ ಗಳನ್ನು ನಿಯಂತ್ರಿಸಲು ಔಷಧಿ ಸಿಂಪಡಿಸಬೇಕು.
✍️ಸುದ್ದಿಯೊಂದಿಗೆ ಮನು ಮಾಕವಳ್ಳಿ
ಕೆ ಆರ್ ಪೇಟೆ..
Tags:
ಕೆ ಆರ್ ಪೇಟೆ ವರದಿ