ವಿಜಯ ಸಂಘರ್ಷ
ಕೆ.ಆರ್.ಪೇಟೆ: ಗ್ರಾಮೀಣ ಜನ ಜೀವನದ ಅಧ್ಯಯನವು ಅತ್ಯಂತ ಮಹತ್ವದ್ದಾಗಿದ್ದು ಪ್ರಸ್ತುತ ದಿನಮಾನ ಗಳಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಬದುಕು ಆಧುನಿಕರಣದ ಪ್ರಭಾವದಿಂದಾಗಿ ಮಾರ್ಪಾಡುಗಳಾ ಗುತ್ತಿದ್ದು ಯುವಕರು ಗ್ರಾಮೀಣ ಬದುಕಿನೊಂದಿಗೆ ಹೆಚ್ಚಿನ ಒಡನಾಟ ಬೆಳೆಸಿಕೊಳ್ಳಬೇಕೆಂದು ಶಾಸಕ ಹೆಚ್.ಟಿ. ಮಂಜು ತಿಳಿಸಿದರು.
ತಾಲೂಕಿನ ಬೂಕನಕೆರೆ ಹೋಬಳಿ ಅರಳಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಸಮಾಜ ಕಾರ್ಯ ಗ್ರಾಮೀಣ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ಆಧುನಿಕತೆಗೆ ಒಳಗಾಗಿ ತಮ್ಮ ನೈಜ ಬದುಕನ್ನು ಕಳೆದು ಕೊಳ್ಳುತ್ತಿದ್ದಾರೆ. ಇಂದಿನ ದಿನ ಮಾನಸಗಳಲ್ಲಿ ಪ್ರತಿಯೊಬ್ಬರು ತಮ್ಮ ನಾಡು ನುಡಿ ಸಂಸ್ಕೃತಿ ಯನ್ನು ಉಳಿಸಿಕೊಡು ಬೆಳೆಸ ಬೇಕಾದ ಜವಾಬ್ಧಾರಿ ಎಲ್ಲರ ಮೇಲಿದೆ. ನಗರ ಪ್ರದೇಶದ ವಿದ್ಯಾರ್ಥಿ ಗಳು ತಮ್ಮ ಉನ್ನತ ವ್ಯಾಸಂಗದಲ್ಲಿ ಗ್ರಾಮೀಣ ಪ್ರದೇಶದ ಜನ ಜೀವನದ ಶೈಲಿ ಮತ್ತು ಜಾನಪದ ಕಲೆಗಳ ಬಗ್ಗೆ ತಿಳಿದುಕೊಂಡು ಉನ್ನತ ಅಧ್ಯಯನ ಮಾಡುತ್ತಿದ್ದು ತಮ್ಮ ನಾಡು ನುಡಿಯ ಬಗ್ಗೆ ತಿಳಿದುಕೊಳ್ಳಲು ಬಂದಿರುವ ಸಮಾಜ ಕಾರ್ಯ ಶಿಬಿರಾರ್ಥಿಗಳಿಗೆ ಗ್ರಾಮಸ್ಥರು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಿ, ಶಿಬಿರಾರ್ಥಿಗಳು ನೀಡುವ ಮಾಹಿತಿಯನ್ನು ಪಡೆಯ ಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿ. ಗ್ರಾಮೀಣ ಪ್ರದೇಶದ ಬದುಕು ಸುಂದರವಾಗಿದ್ದು,ಗ್ರಾಮೀಣ ಜೀವನ ಶೈಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಇಂದಿನ ಗ್ರಾಮೀಣ ಯುವಕರು ಕೃಷಿಯನ್ನು ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತೆ ಯುವಕರು ಹಳ್ಳಿ ಗಳಲ್ಲಿ ಬಂದು ಕೃಷಿಯನ್ನು ತಮ್ಮ ಮುಖ್ಯ ಕಸುಬನ್ನು ಮಾಡಿಕೊಳ್ಳುತ್ತಾರೆ ಎಂದು ಶಾಸಕ ಹೆಚ್. ಟಿ. ಮಂಜು ತಿಳಿಸಿದರು.
ಸಮಾಜ ಕಾರ್ಯದ ಮುಖ್ಯಸ್ಥರಾದ ಭಾಗ್ಯಜ್ಯೋತಿ ಎ.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಬಿರಾಧಿಕಾರಿ ಗಳಾದ ಅನಿತಾ ಎಸ್,ಎನ್, ನಾಗರಾಜ್ ಜೆ. ಆರ್, ಮಂಜುನಾಥ ಆರ್, ಹರೀಶ್ ಕುಮಾರ್ ಸಿ.ಬಿ, ಪುನೀತ್ ಕುಮಾರ್ ಎನ್.ಬಿ, ಶಿಕ್ಷಕರಾದ ಯೋಗೇಶ್,ರಮೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಪಾಪಣ್ಣ. ಸ್ನಾತಕೋತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ.*
Tags:
ಕೆ.ಆರ್.ಪೇಟೆ ವರದಿ