ಪಿಂಚಣಿ ವಂಚಿತ ನೌಕರರಿಂದ ಒಪಿಎಸ್ ಜಾರಿಗೆ ಒತ್ತಾಯ

ವಿಜಯ ಸಂಘರ್ಷ 
ಭದ್ರಾವತಿ: ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಓಪಿಎಸ್ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಸರಕಾರಕ್ಕೆ ತಹಸೀಲ್ದಾ‌ರ್ ಮೂಲಕ ಮನವಿ ಸಲ್ಲಿಸಿದೆ.

ಕಾಂಗ್ರೇಸ್ ರಾಜ್ಯ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಎನ್‌ಪಿಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೊಳಿಸುವುದಾಗಿ ಹೇಳಿ ನೀಡಿದ ಭರವಸೆ ಈಡೇರಿಸಿಲ್ಲ. ಆದ್ದರಿಂದ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಗೊಳಿಸಬೇಕು. ಓಪಿಎಸ್ ಜಾರಿ ಗೊಳಿಸಲು ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌಕರರಿಗೆ ನೀಡಿರುವಂತೆ ಎನ್‌ಪಿಎಸ್ ಯಥಾವತ್ತಾಗಿ ಜಾರಿಗೆ ತರುವುದು. ಅಂದರೆ ನೇಮಕಾತಿ ಅಧಿಕಾರದ ವಂತಿಕೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರ ಭರಿಸುವುದು.

ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ ವಿದೇ ಯಕ-2014 ಕ್ಕೆ ತಿದ್ದುಪಡಿ ತಂದು ಅಥವಾ ರದ್ದು ಪಡಿಸಿ ಭವಿಷ್ಯವರ್ತಿ ಯಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳುವುದು. ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ಸರಕಾರಿ ನೌಕರರಿಗೆ ನೀಡುವಂತೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮಾಡುವುದು, ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೂ ಯಾವುದೇ ತಾರತಮ್ಯ ತೋರದಂತೆ ಸೌಲಭ್ಯಗಳು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಶಿವಲಿಂಗೇಗೌಡ ಅಧ್ಯಕ್ಷ ಸಿ.ಪಿ.ರವಿ ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿ ಗಳಾದ ಸಿ.ಡಿ.ಮಂಜುನಾಥ್, ರವಿನಾಯ್ಕ,ನಾಗಾಭೋವಿ, ಮುಖ್ಯ ಶಿಕ್ಷಕರಾದ ಪರಮೇಶ್ವರಪ್ಪ, ಶ್ರೀನಿವಾಸ್‌ ಜಾಜೂರ್, ಜಿ.ಜಿ. ನಾಗರಾಜ್, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು