ರಕ್ತದಾನ ತುರ್ತು ಸಂದರ್ಭ ದಲ್ಲಿ ಹೆಚ್ಚಿನ ಅನುಕೂಲ

ವಿಜಯ ಸಂಘರ್ಷ 
ಭದ್ರಾವತಿ: ರಕ್ತದಾನ ಮಹಾದಾನ, ವಿದ್ಯಾರ್ಥಿಗಳು ರಕ್ತ ನೀಡುವುದರಿಂದ ತುರ್ತು ಸಂದರ್ಭದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಅನೇಕ ಬಡ ಜನರಿಗೆ ಉಪಯೋಗ ವಾಗುತ್ತದೆ ಎಂದು ಡಾ:ವರುಣ್ ಹೇಳಿದರು.

ನ್ಯೂಟೌನ್ ಕರುಣಾ ಸೇವಾ ಕೇಂದ್ರ, ರೋಟರಿ ರಕ್ತ ನಿಧಿ ಹಾಗೂ ಸಂತ ಚಾರ್ಲ್ ಪದವಿ ಕಾಲೇಜಿನ ಸಹ ಯೋಗದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸ ಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಪಾಲನಾ ಪರಿಷತ್ತಿನ ಕಾರ್ಯ ದರ್ಶಿ ವಿಲ್ಸನ್ ಮಾತನಾಡಿ, ಎಲ್ಲರೂ ರಕ್ತದಾನ ಮಾಡಬಹುದು. 18 ರಿಂದ 60 ವರ್ಷ ವಯಸ್ಸಿನ ಆರೋಗ್ಯ ವಂತ ವ್ಯಕ್ತಿಗಳು ರಕ್ತದಾನ ಮಾಡ ಬಹುದು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ವಿದ್ಯಾರ್ಥಿಗಳು, ಯುವಜನರು ರಕ್ತದಾನ ಮಾಡಬೇಕು ಎಂದರು.

ಫಾದರ್ ಲ್ಯಾನ್ಸಿ ಡಿಸೋಜಾ, ಸಿಸ್ಟರ್ ಜೆಸ್ಸಿಂತ, ಸಿಸ್ಟರ್ ಕಾರ್ಮಿನ್, ಗಿರೀಶ್, ಸಿಸ್ಟರ್ ಹೆಲನ್ ಮೊರಾಸ್ ಸೇರಿದಂತೆ ಮತರರಿದ್ದರು.

ಕಾಲೇಜಿನ ಸುಮಾರು 100 ವಿದ್ಯಾರ್ಥಿ ಗಳು, ಕರುಣಾ ಸೇವಾ ಕೇಂದ್ರದ ಸದಸ್ಯರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿದ್ದರು. ಸುಮಾರು 49 ಮಂದಿ ರಕ್ತದಾನ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು