ವಿಜಯ ಸಂಘರ್ಷ
ಭದ್ರಾವತಿ: ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಆ.26ರ ಸೋಮವಾರ ಚುನಾವಣೆ ನಡೆಯಲಿದ್ದು, ಈ ಬಾರಿ ಸಾಮಾನ್ಯ ಮೀಸಲಾತಿ ನಿಗದಿ ಯಾಗಿರುವ ಹಿನ್ನಲೆಯಲ್ಲಿ ತೀವ್ರ ಪೈಪೋಟಿ ಎದುರಾಗಿದೆ.
ನಗರಸಭೆ ಮುಂದಿನ 30 ತಿಂಗಳ 2ನೇ ಅವಧಿಗೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ನಿಗದಿಯಾಗಿದ್ದು, ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಎಲ್ಲಾ ಸದಸ್ಯರಿಗೂ ಅಧಿಕಾರ ಹಂಚುವ ಮೂಲಕ ಯಾವುದೇ ಗೊಂದಲಕ್ಕೆ ಎಡೆಮಾಡಿ ಕೊಡದೆ ಆಡಳಿತ ಮುಂದುವರೆಸಿ ಕೊಂಡು ಹೋಗುವ ಉದ್ದೇಶಹೊಂದಿದೆ.
ಈ ಹಿನ್ನಲೆಯಲ್ಲಿ ಮೊದಲ 30 ತಿಂಗಳ ಅವಧಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಅಧಿಕಾರ ಹಂಚಿಕೆ ಮೂಲಕ ಯಶಸ್ವಿಯಾಗಿ ನಿಭಾಯಿಸಲಾಗಿದೆ. ಮೊದಲ ಅವಧಿ ಯಲ್ಲಿ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾದ ಹಿನ್ನಲೆಯಲ್ಲಿ ಸದಸ್ಯ ರಾದ ಚನ್ನಪ್ಪ ಮತ್ತು ಸರ್ವಮಂಗಳ ಭೈರಪ್ಪ ಇಬ್ಬರು ಮಾತ್ರ ಅಧಿಕಾರ ನಡೆಸಿದ್ದರು. ಆದರೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾ ಗಿದ್ದ ಹಿನ್ನಲೆಯಲ್ಲಿ 4 ಜನರ ನಡುವೆ ಅಧಿಕಾರ ಹಂಚಿಕೆಯಾಗಿತ್ತು.
ಈ ಬಾರಿ ಪುನಃ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಹಿನ್ನಲೆಯಲ್ಲಿ ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ. ಈ ನಡುವೆ ಇದರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇನ್ನೂ ನಿಗದಿಯಾಗಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ನಿಗದಿಯಾಗಿದೆ.
ನಗರಸಭೆ ಒಟ್ಟು 35 ಸ್ಥಾನಗಳ ಪೈಕಿ ಕಾಂಗ್ರೆಸ್-18, ಜೆಡಿಎಸ್-12, ಬಿಜೆಪಿ- 4 ಮತ್ತು ಪಕ್ಷೇತರ-1 ಸದಸ್ಯರ ಬಲ ಹೊಂದಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಹೊಂದಿರುವ ಹಿನ್ನಲೆಯಲ್ಲಿ ಮೊದಲ ಅವಧಿಯಲ್ಲಿ ಅಧಿಕಾರ ನಡೆಸಿರುವ 6 ಸದಸ್ಯರನ್ನು ಹೊರತು ಪಡಿಸಿ ಉಳಿದ 12 ಸದಸ್ಯ ರಿಗೆ ಇದೀಗ ಅಧಿಕಾರ ಹಂಚಿಕೆ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ತೀವ್ರ ಪೈಪೋಟಿ ಎದುರಾಗಿದೆ.
ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಉಪ ವಿಭಾಗಾಧಿ ಕಾರಿಗಳು ಆ.24ರ ಶನಿವಾರ ಪ್ರಕಟಣೆ ಹೊರಡಿಸಿದ್ದು, ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿದೆ.
Tags:
ಭದ್ರಾವತಿ ನಗರಸಭೆ ಸುದ್ದಿ