ವಿಜಯ ಸಂಘರ್ಷ
ಶಿವಮೊಗ್ಗ: ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಪೀಳಿಗೆ ಯವರಿಗೆ ತಿಳಿಸುವುದು ಅಗತ್ಯ ಎಂದು ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಸೀಮಾ ಸದಾನಂದ್ ಹೇಳಿದರು.
ನಗರದಲ್ಲಿ ದೈವಜ್ಞ ಮಹಿಳಾ ಮಂಡಳಿ ಯಿoದ ಏರ್ಪಡಿಸಿದ್ದ ಅರಿಸಿಣ -ಕುಂಕುಮ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸ ಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಮಹಿಳಾ ಮಂಡಳಿಯಿಂದ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಶ್ರಾವಣ ಮಾಸದಲ್ಲಿ ದೈವಜ್ಞ ಮಹಿಳಾ ಮಂಡಳಿಯಿಂದ 28 ವರ್ಷದಿಂದಲೂ ಅರಿಶಿಣ-ಕುಂಕುಮ ಕಾರ್ಯಕ್ರಮ ನಡೆಸಲಾಗುತ್ತಿದೆ. ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುವ ಜತೆಯಲ್ಲಿ ಸೇವಾ ಚಟುವಟಿಕೆಗಳನ್ನು ಸಹ ನಡೆಸಲಾಗುತ್ತದೆ ಎಂದರು.
ಶ್ಸಮಾಜದ ಮಹಿಳೆಯರೆಲ್ಲರೂ ಸೇರಿ ಲಲಿತಾ ಸಹಸ್ರನಾಮ, ಭಜನೆ ಮಾಡಿ ಲಕ್ಷ್ಮೀ ಪೂಜೆ, ಅರಿಶಿಣ-ಕುಂಕುಮ ಕೊಟ್ಟು ಪ್ರಸಾದ ವಿನಿಯೋಗ ನಡೆಸಲಾಯಿತು. ಆರ್ಥಿಕವಾಗಿ ಹಿಂದುಳಿದ ಮಹಿಳೆಗೆ ಸ್ವಾವಲಂಬಿ ಯಾಗಿ ಜೀವನ ನಡೆಸಲು ಅಗತ್ಯವಾದ ಜಿಗ್-ಜಾಗ್ ಮಿಷನ್ ಕೊಡಲಾಯಿತು.
ಇದೇ ಸಂದರ್ಭದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಮುಖ್ಯ ಅಧಿಕಾರಿ ಡಾ. ಕಮಲಾ, ಕಣ್ಣು ಹಾಗೂ ಗ್ಲೂಕೋಮಿಯ ಕುರಿತು ಮಾಹಿತಿ ನೀಡಿ, ಕಣ್ಣು ತುಂಬಾ ಸೂಕ್ಷ್ಮ ಆಗಿದ್ದು, ಗ್ಲೂಕೋಮಿಯ ಎಂಬ ಕಣ್ಣಿನ ಕಾಯಿಲೆ ಹೇಗೆ ಬರುತ್ತದೆ ಎಂದು ತಿಳಿಯುವುದಿಲ್ಲ. ಆದ್ದರಿಂದ ಜಾಗೃತರಾಗಿ ಸಕಾಲದಲ್ಲಿ ಕಣ್ಣುಗಳನ್ನು ಪರೀಕ್ಷಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಶ್ರಾವಣ ಮಾಸ ಬಂತೆoದರೆ ಹೆಣ್ಣು ಮಕ್ಕಳಿಗೆ ಸಂಭ್ರಮದ ತಿಂಗಳು. ರಾಖಿ ಕಟ್ಟುವ ಮೂಲಕ ಸಂಭ್ರಮಿಸುವ ಹಬ್ಬ. ನಮಗೆ ರಕ್ಷಣೆ ನೀಡುವ ಆರಕ್ಷರನ್ನು ರಾಖಿ ಕಟ್ಟಿ ರಾಖಿ ಹಬ್ಬವನ್ನು ಆಚರಿಸಬೇಕೆಂಬ ಅಧ್ಯಕ್ಷರ ಆಶಯದಂತೆ ಅಡಿಷನಲ್ ಸೂಪರಿಡೆಂಟ್ ಆಫ್ ಪೋಲಿಸ್ ಅನಿಲ್ ಕುಮಾರ್ ಬೊಮ್ಮಾರೆಡ್ಡಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಖಿ ಕಟ್ಟಲಾಯಿತು. ಅಗತ್ಯ ಮಾಹಿತಿಯನ್ನು ಹಂಚಿಕೊಂಡರು.
ಮಹಿಳೆಯರು ರಾಖಿಯನ್ನು ಕಟ್ಟಿ, ಸಿಹಿ ತಿನ್ನಿಸಿ ಆರತಿ ತೆಗೆದರು. ಇದೊಂದು ವಿಶೇಷ ಕಾರ್ಯಕ್ರಮ ಆಗಿತ್ತು. ಎಲ್ಲ ಮಹಿಳೆಯರು ಶ್ರಾವಣ ಮಾಸದ ಹಬ್ಬವನ್ನು ಸಂಭ್ರಮಿಸಿದರು.
ಉಪಾಧ್ಯಕ್ಷರಾದ ಪ್ರೇಮ ರಮೇಶ್, ಅರ್ಚನಾ ಅಣ್ಣಪ್ಪ, ಕಾರ್ಯದರ್ಶಿ ವಾಣಿ ಪ್ರವೀಣ್, ಸಹ ಕಾರ್ಯದರ್ಶಿ ಚೇತನಾ ವಾದಿರಾಜ್, ಸುಧಾ ಸುರೇಶ್, ಖಜಾಂಚಿ ರೂಪಾ ರವಿ, ನಿರ್ದೇಶಕರು, ಸದಸ್ಯೆಯರಿದ್ದರು.
Tags:
ಶಿವಮೊಗ್ಗ ಸುದ್ದಿ