ಹಬ್ಬಗಳ ಆಚರಣೆ ಒಗ್ಗಟ್ಟಿನಿಂದ ಆಚರಿಸುವಂತಾಗಬೇಕು: ಜಿ.ಕೆ.ಮಿಥುನ್ ಕುಮಾರ್‌

ವಿಜಯ ಸಂಘರ್ಷ 
ಭದ್ರಾವತಿ: ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದೆ ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡಾಗ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಸಾಧ್ಯ ವಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ. ಕೆ.ಮಿಥುನ್ ಕುಮಾರ್‌ಹೇಳಿದರು.

ಅವರು ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆ ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯ ನೇತೃತ್ವವಹಿಸಿ ಮಾತನಾಡಿದರು.

ನಮ್ಮದು ಶಾಂತಿ, ಸೌಹಾರ್ದತೆ ಬಯಸುವ ಸಮಾಜ. ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸುವಂತಾಗ ಬೇಕು.ಆಗ ಮಾತ್ರ ಹಬ್ಬಗಳ ಆಚರಣೆ ಸಾರ್ಥಕ ವಾಗುತ್ತದೆ. ಹಬ್ಬಗಳ ಆಚರಣೆ ಮೂಲಕ ನಮ್ಮ ಮಕ್ಕಳಿಗೆ ನಾವು ಯಾವ ರೀತಿ ಸಂದೇಶ ನೀಡುತ್ತೇವೆ ಎಂಬುದು ಸಹ ಅವಲಂಬಿತವಾಗಿರುತ್ತದೆ. ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಮಹಾ ಸಭಾ, ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ.ಕದಿರೇಶ್, ಪ್ರಮುಖರಾದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು, ನರಸಿಂಹಚಾರ್, ಚನ್ನಪ್ಪ ಸೇರಿದಂತೆ ಮತ್ತಿತರರು ಮಾತನಾಡಿ, ಹಬ್ಬವನ್ನು ಶಾಂತಿ-ಸೌಹಾರ್ದತೆ ಯಿಂದ ಆಚರಿಸುವಂತೆ ಮನವರಿಕೆ ಮಾಡಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತ ರಾಜ್,ತಹಸೀಲ್ದಾರ್‌ ಕೆ.ಆರ್. ನಾಗರಾಜು, ಉಪ ತಹಸೀಲ್ದಾರ್ ಮಂಜಾನಾಯ್ಕ, ಪರಿಸರ ಅಭಿಯಂತರ ಪ್ರಭಾಕ‌ರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್‌. ನಾಗರಾಜ್, ವೃತ್ತ ನಿರೀಕ್ಷಕರಾದ ಶ್ರೀಶೈಲ ಕುಮಾರ್, ನಾಗಮ್ಮ, ಲಕ್ಷ್ಮಿಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.

ಅಂಜುಮನ್ ಇಸ್ಲಾವುಲ್ ಮುಸ್ಲಿ ಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಮಾಜಿ ಅಧ್ಯಕ್ಷ ಬಾಬಾ ಜಾನ್, ಮಾಜಿ ಉಪಮೇಯರ್ ಮಹಮದ್‌ ಸನಾವುಲ್ಲಾ, ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಬಜರಂಗದಳ ರಾಘವನ್ ವಡಿವೇಲು, ಕೇಸರಿಪಡೆ ಗಿರೀಶ್, ಅಮೀರ್‌ಜಾನ್, ಅಬಿದಾಲಿ, ರಾಜ್ ಕುಮಾರ್ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು