ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ: ನೂತನ ನಿರ್ದೇಶಕರಿಗೆ ಸನ್ಮಾನ

ವಿಜಯ ಸಂಘರ್ಷ 
ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿ ಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024-2029ನೇ ಸಾಲಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಸನ್ಮಾನಿಸಿ ಅಭಿನಂದಿಸಿದರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಆಲಂಬಾಡಿಕಾವಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಆಡಳಿತ ಮಂಡಳಿಯ ಎಲ್ಲಾ 13ಸ್ಥಾನಗಳಿಗೆ ಗ್ರಾಮದ ಎಲ್ಲಾ ಸಮುದಾಯದ ವರ್ಗದ ಜನರಿಂದ ಕೂಡಿದ ನಿರ್ದೇಶಕ ಮಂಡಳಿಯನ್ನು ಎಲ್ಲಾ ಜನಾಂಗದ ಯಜಮಾನರುಗಳನ್ನು ಹಾಗೂ ಮುಖಂಡ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧವಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ. ಇದೇ ರೀತಿ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸಂಘದ ನೌಕರರನ್ನು ಆಯ್ಕೆ ಮಾಡಿಕೊಂಡು ಸಂಘದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಂಘದಲ್ಲಿ ರಾಜಕೀಯ ಬೆರೆಸದೇ ಎಲ್ಲರೂ ಪರಸ್ಪರ ಸಹಕಾರ ಹಾಗೂ ಸೇವಾ ಭಾವನೆಯಿಂದ ಸಂಘದ ಏಳಿಗೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. 

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಮಾತನಾಡಿ ಆಲಂಬಾಡಿಕಾವಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆರಂಭಸಬೇಕೆಂದು ಕಳೆದು 30ವರ್ಷಗಳಿಂದ ಪ್ರಯತ್ನಿಸಲಾಗಿತ್ತು. ಆದರೆ ಕಾರಣಾಂತರ ಗಳಿಂದ ಸಂಘವನ್ನು ಆರಂಭಿಸಲು ಆಗಿರಲಿಲ್ಲ. ಈಗ ಗ್ರಾಮದವರೇ ಆದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಗ್ರಾಮದ ಅಭಿವೃದ್ಧಿಗೆ ಹಾಲಿನ ಡೇರಿ ಅವಶ್ಯಕತೆ ಇರುವುದನ್ನು ಕಣ್ಣಾರೆ ಕಂಡು, ಹೇಗಾದರೂ ಮಾಡಿ ಗ್ರಾಮದಲ್ಲಿ ಡೇರಿ ಯನ್ನು ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ, ಎಲ್ಲಾ ಸಮುದಾಯದ ಬಂಧುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚರ್ಚೆನಡೆಸಿ, ಎಲ್ಲರಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಿರ್ದೇಶಕರ ಸ್ಥಾನಗಳನ್ನು ಯಾವುದೇ ಲೋಪವಿಲ್ಲದೇ ಹಂಚಿಕೆ ಮಾಡಿದ ಪರಿಣಾಮ ಯಾವುದೇ ಚುನಾವಣೆ ಇಲ್ಲದೇ ಸಂಘಕ್ಕೆ 13 ಮಂದಿ ನಿರ್ದೇಶಕರು ನಿಗಧಿಯಾಗಿದ್ದ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ನೌಕರರ ಆಯ್ಕೆಗೂ ಮಲ್ಲಿಕಾರ್ಜುನ್ ಅವರಿಗೇ ಸಂಪೂರ್ಣ ಅಧಿಕಾರ ನೀಡಿದ್ದೇವೆ ಅವರು ಯಾರನ್ನು ಆಯ್ಕೆ ಮಾಡುತ್ತಾರೋ ಅವರು ಅಧಿಕಾರ ವಹಿಸಿಕೊಂಡು ಸಂಘದ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದು ಸಂಜೀವಪ್ಪ ಸಲಹೆ ನೀಡಿದರು.

ಬಳಿಕ ಆಲಂಬಾಡಿಕಾವಲು ವಿ.ಎಸ್.ಎಸ್.ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಿಕ್ ಅಹಮದ್ ಮಾತನಾಡಿ ಕಳೆದ 30ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆರಂಭಿಸಲು ಪ್ರಯತ್ನಿಸಲಾಗಿತ್ತು. ಆಡಳಿತ ಮಂಡಳಿ ಹಾಗೂ ನೌಕರರ ಆಯ್ಕೆಯ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಒಮ್ಮತವಿಲ್ಲದೇ, ವೈಮನಸ್ಸು ಉಂಟಾಗಿ ಸಂಘವನ್ನು ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗ ನಮ್ಮ ಗ್ರಾಮದ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಹಾಲಿನ ಡೈರಿ ಆರಂಭದ ಜವಾಬ್ದಾರಿಯನ್ನು ತೆಗೆದುಕೊಂಡು ಯಶಸ್ವಿಯಾಗಿ ಸಂಘವನ್ನು ಆರಂಭಿಸುವಲ್ಲಿ ಸಫಲರಾಗಿದ್ದಾರೆ. ಮಲ್ಲಿಕಾರ್ಜುನ್ ಅವರು ಡೈರಿ ಆರಂಭಿಸುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೇ ಇದ್ದರೆ ಇನ್ನು ಹತ್ತಾರು ವರ್ಷ ಡೇರಿ ಆರಂಭಿವಾಗುತ್ತಲೇ ಇರಲಿಲ್ಲ. ಆಲಂಬಾಡಿಕಾವಲು ಗ್ರಾಮದಲ್ಲಿ ಇಂದು ಹಾಲಿನ ಡೈರಿ ಆರಂಭವಾಗಿದೆ ಎಂದರೇ ಅದರ ಸಂಪೂರ್ಣ ಕ್ರೆಡಿಟ್ ಪೂರ್ಣ ಮಲ್ಲಿಕಾರ್ಜುನ್ ಅವರಿಗೆ ಸಲ್ಲಬೇಕು. ಜೊತೆಗೆ ಎಲ್ಲಾ ಸಮುದಾಯದವರಿಗೂ ಸಲ್ಲಬೇಕು ಎಂದು ಸಿದ್ದಿಕ್ ತಿಳಿಸಿದರು.

ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ದಿವಾಕರ್.ಕೆ.ಮಾಸ್ತಿಗೌಡ, ಅಬ್ದುಲ್ ಫಜುಲು, ಮಂಜುನಾಥ್.ಎ.ಎಂ ಮಹಬೂಬ್‌ಖಾನ್(ಪಠಾಣ್‌ಬಾಬು), ಎನ್.ಕೃಷ್ಣೇಗೌಡ, ಚನ್ನಕೃಷ್ಣ, ಎಸ್.ಪ್ರಭಾಕರ್ ಮಹಿಳಾ ಮೀಸಲು ಕ್ಷೇತ್ರದಿಂದ ಯಶೋಧಮ್ಮಶಿವಣ್ಣೇಗೌಡ, ಭಾನಮತಿ ಜಯರಾಮೇಗೌಡ, ಬಿಸಿಎಂಎ ಮೀಸಲು ಕ್ಷೇತ್ರದಿಂದ ಎಂ.ಮೋಹನ್, ಕೆ.ಕೃಷ್ಣೇಗೌಡ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎ.ಎಸ್.ಸಂತೋಷ್‌ಕುಮಾರ್, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜಗದೀಶ್ ಅವರು ಅವಿರೋಧವಾಗಿ ಆಯ್ಕೆಗೊಂಡ ನೂತನ ನಿರ್ದೇಶಕರನ್ನು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಹೃದಯಸ್ಪರ್ಧಿಸುವಂತೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಎ.ಎಂ.ಸಂಚಿವಪ್ಪ ವಿ.ಎಸ್.ಎಸ್.ಎನ್. ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಿಕ್ ಅಹಮದ್, ಗ್ರಾಮ ಪಂಚಾಯಿತಿ ಸದಸ್ಯ ಎ.ರಾಜು, ರವಿ, ಡಿ.ಮಹಾದೇವ್, ಪ್ರಮೋದ್‌ಕುಮಾರ್, ತಾ.ಪಂ.ಮಾಜಿ ಸದಸ್ಯೆ ಮುತ್ತಮ್ಮ ನಾಗರಾಜು, ಮೂರ್ತಿ ಮತ್ತಿತರರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು