ವಿಜಯ ಸಂಘರ್ಷ
ಭದ್ರಾವತಿ: ಬಹು ವರ್ಷಗಳ ಬೇಡಿಕೆ ಯಂತೆ ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕಿನ ಉಜ್ಜಯಿನಿ ಮಹಾಪೀಠಕ್ಕೆ ಕರ್ನಾಟಕ ರಸ್ತೆ ಸಾರಿಗೆ ಘಟಕದಿಂದ ನೂತನ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಉಜ್ಜಯನಿ ಮಹಾಪೀಠದ ಭಕ್ತರು ಈ
ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ
ವ್ಯವಸ್ಥೆ ಕಲ್ಪಿಸಿಕೊಡುವಂತೆ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ರವರ ಮೂಲಕ ಹಲವಾರು ಬಾರಿ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಭದ್ರಾವತಿ ನಗರದಿಂದ ಬೆಳಿಗ್ಗೆ 7 ಗಂಟೆ ಬಸ್ ಹೊರಡಲಿದ್ದು, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ ಮಾರ್ಗವಾಗಿ ಮಧ್ಯಾಹ್ನ 12 ಗಂಟೆಗೆ ಉಜ್ಜಯಿನಿ ತಲುಪಲಿದೆ. ಮಧ್ಯಾಹ್ನ 1.30ಕ್ಕೆ ವಾಪಸ್ ಹೊರಡುವ ಬಸ್ಸು ಸಂಜೆ 6.30 ಕ್ಕೆ ಭದ್ರಾವತಿ ತಲುಪಲಿದೆ. 190 ಕಿ.ಮೀ ದೂರದ ಒಂದು ಬದಿಯ ಪ್ರಯಾಣಕ್ಕೆ 202/- ರೂ.ದರ ನಿಗಧಿಪಡಿಸಿದೆ.
ಶ್ರೀ ರಾಚೋಟೇಶ್ವರ ಶಿವಾಚಾರ್ಯ
ಸ್ವಾಮೀಜಿಯವರು ಸಾರಿಗೆ ವ್ಯವಸ್ಥೆ
ಕಲ್ಪಿಸಿಕೊಟ್ಟಿರುವ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸದಾ ಕಾಲ ಉಜ್ಜಯಿನಿ ಮಹಾಪೀಠದ ಜಗದ್ಗುರುಗಳ ಆಶೀರ್ವಾದ ವಿರಲಿ ಹಾಗು ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನಗರಸಭೆ ನೂತನ ಉಪಾಧ್ಯಕ್ಷ ಮಣಿ,
ಸದಸ್ಯರಾದ ಬಿ.ಕೆ ಮೋಹನ್, ಸುದೀಪ್ ಕುಮಾರ್, ಸೂಡಾ ಸದಸ್ಯ ಎಚ್.ರವಿಕುಮಾರ್, ಮುಖಂಡರಾದ
ಸಿದ್ದಲಿoಗಯ್ಯ, ಬಿ.ಕೆ ಜಗನ್ನಾಥ್, ಲಕ್ಷ್ಮಣ್, ಶ್ರೀನಿವಾಸ್ ಹಾಗೂ ಘಟಕ ವ್ಯವಸ್ಥಾಪಕ ಮೂರ್ತಿ ಬಿ, ನಿಯಂತ್ರಕ ವಿಠ್ಠಲ್, ಕೃಷ್ಣಮೂರ್ತಿ ಸೇರಿದಂತೆ ಸಿಬ್ಬಂದಿಗಳು ಇನ್ನಿತರರಿದ್ದರು.