ವಿಜಯ ಸಂಘರ್ಷ
ಶಿವಮೊಗ್ಗ: ಕಿಮ್‌ಸ್ಟಾರ್ ಉಡುಪಿ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ.ಕೆ.ವೆಂಕಟ ಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ನಡೆದ ಬೆಂಗಳೂರು ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ರೋಟರಿ ಜಿ.ವಿಜಯಕುಮಾರ್ ಅವರಿಗೆ “ಡಾ. ಪುನೀತ್ ರಾಜ್‌ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ವಿಜಯಕುಮಾರ್ ಅವರು ದಶಕಗಳಿಂದ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಬಡವರಿಗೆ ಆರ್ಥಿಕ ಸಹಾಯ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸೈಕ್ಲಿಂಗ್‌ನಲ್ಲಿ ಗಿನ್ನಿಸ್ ಲಿಮ್ಕಾ ದಾಖಲೆ ಮಾಡಿದ್ದಾರೆ. 47 ಬಾರಿ ರಕ್ತದಾನ ಮಾಡಿರುವ,ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಡಾ.ಪುನೀತ್ ರಾಜ್ ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ ನೀಡಿ ಪುನೀತ್‌ರಾಜ್ ಪುತ್ಥಳಿ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸ ಲಾಯಿತು.
ಖ್ಯಾತ ಜನಪದ ಗಾಯಕ ಗುರುರಾಜ್ ಹೊಸಕೋಟಿ, ಚಲನಚಿತ್ರ ನಿರ್ದೇಶಕ ಲೋಹಿತ್ ರಾಣ, ಚಿತ್ರನಟಿ ರಕ್ಷಾ, ಕಿಮ್‌ಸ್ಟಾರ್ ಉಡುಪಿ ಸಂಸ್ಥೆ ಅಧ್ಯಕ್ಷ ಕೆ.ಜಯಶೀಲನ್, ಉಡುಪಿ ಕುಕ್ಕೇ ಹಳ್ಳಿಯ ಆದಿಶಕ್ತಿ ಮೂಕಾಂಬಿಕಾ ಶ್ರೀ ಕಾಗಜ್ಜ ದೇವಸ್ಥಾನದ ಧರ್ಮದರ್ಶಿ ಡಾ.ಕೃಷ್ಣ ಕುಲಾಲ್, ವಿದುಷಿ ಉಮಾ ದಿಲೀಪ್, ವಿದ್ಯಾ ಮಂಜುನಾಥ್, ಬಿಂದು ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.
ವಿಜಯಕುಮಾರ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಪದಾಧಿಕಾರಿಗಳು, ಶಿವಗಂಗಾ ಯೋಗಕೇಂದ್ರ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಎಸ್.ಎಸ್. ಜ್ಯೋತಿ ಪ್ರಕಾಶ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.