ಅನಿಲ ಗ್ರಾಹಕರಿಂದ ಹೆಚ್ಚಿನ ಹಣ ಸುಲಿಗೆ: ಗ್ಯಾಸ್ ಏಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ

ವಿಜಯ ಸಂಘರ್ಷ 
ಭದ್ರಾವತಿ: ಅನಿಲ ಗ್ರಾಹಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವ ಹಾಗೂ ಅನಿಲ ಕಂಪನಿಗಳ ಆದೇಶ ಗಳನ್ನು ಪಾಲನೆ ಮಾಡದೆ ಅಕ್ರಮ ಎಸಗಿರುವ ಜನ್ನಾಪುರದ ಓಂ ಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿಯ ಮಾನ್ಯತೆ ರದ್ದು ಮಾಡುವಂತೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಒತ್ತಾಯಿಸಿದರು. 

ಅವರು ಗುರುವಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಮಾತನಾಡಿ, ಇಂಡಿಯನ್ ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಂದ ನಿಗದಿತ ಬೆಲೆಗಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರೆ, ಇಲಾಖೆ ಗಮನಕ್ಕೆ ಬಂದಿದ್ದರು ಸಹ ಮೌನವಹಿ ಸಿರುವುದು ಖಂಡನೀಯ ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಭಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿನ ಆನ್ ಲೈನ್ ನಲ್ಲಿ ಫೋನ್ ಪೆ, ಗೂಗಲ್ ಪೇ ಮೂಲಕ ಗ್ಯಾಸ್ ತೆಗೆದುಕೊಳ್ಳುತ್ತಿರುವ ಗ್ರಾಹಕರ ಹೆಸರು, ವಿಳಾಸ, ಫೋನ್ ನಂಬರ್ ಹಾಗೆ ನೇರವಾಗಿ ಹಣ ಪಾವತಿಸಿ ಅನಿಲ ತೆಗೆದುಕೊಳ್ಳುತ್ತಿರುವ ಗ್ರಾಹಕರ ಹೆಸರು ವಿಳಾಸ ದೂರವಾಣಿ ಸಂಖ್ಯೆ ಪರಿಶೀಲಿಸಿ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗ್ಯಾಸ್ ಏಜೆನ್ಸಿ ವಿತರಕರು ಸಿಲಿಂಡರ್ ನೀಡುವ ಸಂದರ್ಭದಲ್ಲಿ ಗ್ರಾಹಕರ ಮುಂದೆ ಗ್ಯಾಸ್ ಲೀಕ್ ಆಗುತ್ತಿದೆಯೋ ಎಂದು ಅನಿಲ ಸೋರಿಕೆಯನ್ನು ತಿಳಿಸುವ ಸಾಧನದಲ್ಲಿ ಪರಿಶೀಲಿಸ ಬೇಕು ಹಾಗೂ ಗ್ಯಾಸ್ ತೂಕ ಸರಿಯಾಗಿದೆಯೋ ಇಲ್ಲವೋ ಎಂದು ತೂಕದ ಯಂತ್ರದಲ್ಲಿ ಗ್ರಾಹಕರ ಮುಂದೆ ಪರಿಶೀಲಿಸಿ ಗ್ಯಾಸ್ ವಿತರಿಸಬೇಕೆಂದು ಸ್ಪಷ್ಟ ಆದೇಶವಿದ್ದರು ನಿರಾಕರಣೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಗ್ಯಾಸ್ ಏಜೆನ್ಸಿ ರವರು ಯಾವುದೆ ಪರಿಶೀಲನೆ ಮಾಡದೆ ವಿತರಿಸುತ್ತಿದ್ದಾರೆ ಎಂಬುದು ಗ್ರಾಹಕರು ಮತ್ತು ಸಾರ್ವಜನಿಕರು ಅಭಿಪ್ರಾಯವಾಗಿದೆ. ಆದ್ದರಿಂದ ಕೂಡಲೇ ಏಜೆನ್ಸಿಯ ಮಾನ್ಯತೆ ರದ್ದು ಪಡಿಸುವಂತೆ ಮನವಿ ಯಲ್ಲಿ ಒತ್ತಾಯಿಸಿದ ಅವರು, ಏಜೆನ್ಸಿ ಯಿಂದ ಗ್ಯಾಸ್ ಅವಘಡಗಳು, ಸಾವು ನೋವು ಸಂಭವಿಸಿದರೆ ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಏಜೆನ್ಸಿ ರವರೇ ನೇರ ಹೊಣೆಗಾರರಾಗಿ ರುತ್ತಾರೆ, ಕ್ರಮಕ್ಕೆ ಮುಂದಾಗದೆ ಇದ್ದಲ್ಲಿ ಆ:19 ರಿಂದ ಆಹಾರ ಇಲಾಖೆಯ ಕಚೇರಿ ಮುಂದೆ ನ್ಯಾಯ ದೊರಕುವವ ರೆಗೂ ಧರಣಿ ಸತ್ಯಾಗ್ರಹ ನಡೆಸುವು ದಾಗಿ ಎಚ್ಚರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು