ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ರೈತರ ಮನೆ ಬಾಗಿಲಲ್ಲಿ
ರಾಶಿ ಅಡಕೆ ತೂಕದಲ್ಲಿ ಮೋಸ ಮಾಡಿದ ವರ್ತಕನಿಗೆ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಲಾಗಿದೆ. ಹೊಳೆಹೊನ್ನೂರು ಸಮೀಪದ ಅರಹ ತೊಳಲಿನ ಬೆಳೆಗಾರರ ಮನೆಯೊಂದ ರಲ್ಲಿ ವ್ಯಾಪಾರಕ್ಕೆ ಬಂದಿದ್ದ ಸ್ಥಳೀಯ ವರ್ತಕ ತಟ್ಟೆಹಳ್ಳಿ ದಿಲೀಪ್, ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಅಡಕೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ.
ಒಂದು ಕ್ವಿಂಟಾಲ್‌ಗೆ 200 ರೂ. ಹಣ ಹೆಚ್ಚಿಗೆ ನೀಡುವುದಾಗಿ ಹೇಳಿ ಅಡಕೆ ಖರೀದಿಸಿದ್ದಾನೆ. ಖರೀದಿಸಿದ 45 ಅಡಕೆ ಚೀಲಗಳನ್ನು ಎರಡು ವಾಹನ ದಲ್ಲಿ ತುಂಬಲಾಗಿತ್ತು. ಅನುಮಾನ ಗೊಂಡ ರೈತರು ಒಂದು ಚೀಲ ಅಡಕೆ ಯನ್ನು ತಕ್ಕಡಿ ಮೇಲೆ ಇರಿಸಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಯಾವುದೋ ಒಂದು ಚೀಲದಲ್ಲಿ ವ್ಯತ್ಯಾಸ ಆಗಿರಬಹುದೆಂದು ಇನ್ನೊಂದೆರಡು ಚೀಲಗಳನ್ನು ಕೆಳಗಿಳಿಸಿ ತೂಕ ಮಾಡಿದ್ದಾರೆ. ವರ್ತಕ ತುಂಬಿದ ಎಲ್ಲ ಚೀಲಗಳಲ್ಲೂ ಮೂರಾಲ್ಕು ಕೆ.ಜಿ. ವ್ಯತ್ಯಾಸ ಕಾಣಿಸಿದೆ. ಎಚ್ಚೆತ್ತ ಬೆಳೆಗಾರರು ದೆಲೇಪ್ ಹಾಗೂ ಹಮಾಲಿ ಕಾರ್ಮಿಕರನ್ನು ಅಲ್ಲೇ ಇರುವಂತೆ ಹೇಳಿ ಗ್ರಾಮಸ್ಥರಿಗೆ ಮೋಸದ ಬಗ್ಗೆ ಮಾಹಿತಿ ನೀಡಿದ್ದಾರೆ. ದಿಲೀಪ್‌ನನ್ನು ಗ್ರಾಮದ ದೇವಸ್ಥಾನಕ್ಕೆ ಕರೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯಿತಿ ಮಾಡಲಾಗಿದೆ.