ವಿಜಯ ಸಂಘರ್ಷ
ಭದ್ರಾವತಿ: ಗಣೇಶನ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ ನಡೆದ ಘಟನೆ ತಾಲ್ಲೂಕಿನ ಅರಬಿಳಚಿ ಕ್ಯಾಂಪಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಅಕ್ಕಪಕ್ಕದ ಪೆಂಡಾಲ್ ನವರು ಡೊಳ್ಳು ಬಾರಿಸುವ ಒಂದೇ ತಂಡದವರನ್ನು ನೇಮಿಸಿದ ಪರಿಣಾಮ ಗಲಾಟೆ ನಡೆದಿರುವು ದಾಗಿ ಹೇಳಲಾಗುತ್ತಿದೆ. ಗಲಾಟೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರು ಮಧ್ಯಪ್ರವೇಶಿಸಿ ಗಣಪತಿ ವಿಸರ್ಜನೆ ಮಾಡಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಅರಬಿಳಚಿ ಕ್ಯಾಂಪ್‌ನಲ್ಲಿ 2 ಗಣಪತಿ ಪೆಂಡಾಲ್‌ಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ 6 ಮಂದಿಗೆ ಗಾಯವಾಗಿದೆ.
ಕ್ಯಾಂಪಿನ 2 ಕಾಲೋನಿಯಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆದಿದೆ. ಗಣಪತಿ ಪ್ರತಿಷ್ಠಾಪನೆ ಮೆರವಣಿಗೆಗೆ 2 ಕಡೆಯಿಂದ ಒಂದೇ ತಂಡದವರಿಂದ ಡೊಳ್ಳು ಬಾರಿಸಲು ಮಾತುಕತೆ ನಡೆದಿತ್ತು. 2 ಸಮುದಾಯದವ ರಿಂದ ಒಂದೇ ಸಮಯಕ್ಕೆ ಮೆರವಣಿಗೆ ಹೊರಟಿತ್ತು. ನಮ್ಮ ಗಣಪತಿ ಮೆರವಣಿಗೆಗೆ ಡೊಳ್ಳು ಬಾರಿಸು ಎಂದು 2 ಗುಂಪಿನ ನಡುವೆ ಡೊಳ್ಳು ಬಾರಿಸುವವರ ಜೊತೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಪೊಲೀಸ್ ಸೇರಿದಂತೆ 6 ಮಂದಿಗೆ ಗಾಯವಾಗಿದೆ. ಗಾಯಾಳುಗಳು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಬಿಳಚಿಯಲ್ಲಿ ನೀರವ ಮೌನ, ಬಂದೋಬಸ್ತ್ ಹೆಚ್ಚಳ, ಈಗ ಹೇಗಿದೆ ಪರಿಸ್ಥಿತಿ?
ಗಣಪತಿ ವಿಸರ್ಜನೆ ವೇಳೆ ಎರಡು ಗುಂಪಿನ ಮಧ್ಯೆ ನಿನ್ನೆ ಗಲಾಟೆಯಾಗಿದ್ದ ಅರಬಿಳಚಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಗಲಾಟೆ ಸಂಬಂಧ ತನಿಖೆ ಚುರುಕುಗೊಂಡಿದ್ದು ಹಲವರ ಬಂಧನ ವಾಗಿದೆ. ಕೆಲವರು ಮನೆ ತೊರೆದಿದ್ದಾರೆ.
ಭಾನುವಾರವು ಗ್ರಾಮದಲ್ಲಿ ಬಂದೋಬಸ್ತ್ ಮುಂದುವರೆದಿದೆ. ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸರು ಗಸ್ತು ನಡೆಸುತ್ತಿದ್ದಾರೆ.