ವಿಜಯ ಸಂಘರ್ಷ
ಶಿವಮೊಗ್ಗ: ಚಾರಣಗಳಲ್ಲಿ ಹೆಚ್ಚು ಯಶಸ್ಸು ಸಾಧಿಸಲು ಸಾಧ್ಯವಾಗಿದ್ದು, ನಿರಂತರ ಚಾರಣಗಳಲ್ಲಿ ಭಾಗವಹಿಸಿದ್ದ ರಿಂದ ಉನ್ನತ ಸ್ಥಾನ ಲಭಿಸಿದೆ ಎಂದು ಯೂತ್ ಹಾಸ್ಟೆಲ್ ರಾಷ್ಟ್ರೀಯ ಮಂಡಳಿ ಸದಸ್ಯ ಅ.ನಾ.ವಿಜಯೇಂದ್ರ ರಾವ್ ಹೇಳಿದರು.
ನಗರದ ಯೂತ್ ಹಾಸ್ಟೆಲ್ ತರುಣೋದಯ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಸದಸ್ಯರು ಅತ್ಯುತ್ತಮವಾಗಿ ಚಾರಣಗಳಲ್ಲಿ ಭಾಗವಹಿಸುತ್ತಿದ್ದಾರೆ. ನನಗೆ ಉನ್ನತ ಸ್ಥಾನ ದೊರಕಲು ಎಲ್ಲರ ಸಹಕಾರ ಕಾರಣ. ಈ ಸನ್ಮಾನ ನಿಮ್ಮೆಲ್ಲರಿಗೂ ಸಲ್ಲಬೇಕು ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ಸ್ ನಿಯಮ, ನಿಬಂಧನೆಗಳು, ಸುರಕ್ಷಿತ ನಡುವಳಿಕೆ, ಪ್ರತ್ಯೇಕ ವಸತಿ ಸೌಕರ್ಯ, ಉತ್ತಮ ಆಹಾರ, ಕಡಿಮೆ ಖರ್ಚಿನಲ್ಲಿ ಇರುವ ಅನುಕೂಲಗಳನ್ನು ಘಟಕದ ಸದಸ್ಯರು ಉಪಯೋಗಿಸುತ್ತಿದ್ದಾರೆ. ಇದರಿಂದ ನಮ್ಮ ಘಟಕವನ್ನು ಗುರುತಿಸಿ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯನಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.
ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ದಿನ ನಿತ್ಯದ ಜಂಜಾಟದಿಂದ ಹೊರಬರಲು ಆಗಾಗ್ಗೆ ಪ್ರಕೃತಿಯೊಂದಿಗೆ ಬೆರೆತು ಚಾರಣ ಮಾಡಿದಾಗ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಹೊಸ ಸ್ನೇಹಿತರು ದೊರಕುತ್ತಾರೆ. ಈ ವಿಚಾರ ದಲ್ಲಿ ಯೂತ್ ಹಾಸ್ಟೆಲ್ಸ್ ಉತ್ತಮ ಕಾರ್ಯಕ್ರಮ ಮಾಡುತ್ತಿರುವುದರಿಂದ ನಮ್ಮ ಘಟಕದ ಸದಸ್ಯರು ಸದುಪ ಯೋಗ ಪಡಿಸಿಕೊಳ್ಳುತ್ತಿ ದ್ದಾರೆ. ಹೆಚ್ಚು ಸದಸ್ಯರನ್ನು ಪರಿಚಯಿಸಬೇಕು ತರುಣೋದಯ ಘಟಕ ಹೆಚ್ಚು ಚಾರಣಗಳನ್ನು ನಿರಂತರ ವಾಗಿ ಆಯೋಜಿಸುತ್ತಿದೆ ಎಂದರು.
ಸುಮಾರಾಣಿ ಪ್ರಾರ್ಥಿಸಿ, ದಿಲೀಪ್ ನಾಡಿಗ್ ಸ್ವಾಗತಿಸಿದರೆ, ಜಿ.ವಿಜಯ ಕುಮಾರ್ ನಿರೂಪಿಸಿ, ಪ್ರಕೃತಿ ಮಂಚಾಲೆ ವಂದಿಸಿದರು.
Tags:
ಶಿವಮೊಗ್ಗ ಸುದ್ದಿ