ಕಪಗಲ್ ಬಳಿ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ವಿಜಯ ಸಂಘರ್ಷ 
ರಾಯಚೂರು: ಶಿಕ್ಷಕರ ದಿನಾಚರಣೆ ಹಿನ್ನೆಲೆ ನೆಚ್ಚಿನ ಶಿಕ್ಷಕರಿಗೆ ಶುಭಾಶಯ ಗಳನ್ನು ತಿಳಿಸಲು ಮುಂದಾದ ವಿದ್ಯಾರ್ಥಿಗಳಿಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಶಾಲಾ ಬಸ್ ಹಾಗೂ ಕೆಎಸ್ ಆರ್ ಟಿಸಿ ನಡುವೆ ಡಿಕ್ಕಿಯಾಗಿ ಎರಡು ಮಕ್ಕಳು ಸಾವನ್ನಪ್ಪಿದ್ದರೆ, ಇನ್ನಿಬ್ಬರ ಕಾಲುಗಳು ತುಂಡು ತುಂಡಾಗಿವೆ. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಬಳಿ ಭೀಕರ ಈ ಅಪಘಾತ ಸಂಭವಿಸಿದೆ. ಇಂದು ಖಾಸಗಿ ಶಾಲಾ ವಾಹನದಲ್ಲಿ ಮಾನ್ವಿ ಸುತ್ತಲಿನ ಕಪಗಲ್, ಕುರ್ಡಿ ಸೇರಿ ವಿವಿಧ ಗ್ರಾಮಗಳ ಪ್ರಾಥಮಿಕ ಶಾಲಾ ಮಕ್ಕಳು ಶಾಲೆಗೆ ಹೊರಟ್ಟಿತ್ತು. ಈ ವೇಳೆ ಮಾನ್ವಿ ಪಟ್ಟಣದ ಮಾರ್ಗ ಮಧ್ಯೆ ಕಪಗಲ್ ಬಳಿ ರಾಯಚೂರು ಮಾರ್ಗವಾಗಿ ಹೊರಟಿದ್ದ ಕೆಎಸ್ ಆರ್​ಟಿಸಿ ಬಸ್ ನಡುವೆ ಡಿಕ್ಕಿಯಾಗಿದೆ‌. ಅಪಘಾತದ ಹೊಡೆತಕ್ಕೆ ಶಾಲಾ ಬಸ್ ಮುಂಭಾಗ ಛಿದ್ರಛಿದ್ರವಾಗಿದೆ.

ಸಮರ್ಥ್​​(7), ಶ್ರೀಕಾಂತ್(12) ಮೃತ ವಿದ್ಯಾರ್ಥಿಗಳು. 32 ಪ್ರಯಾಣಿಕರ ಪೈಕಿ 18 ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತು 14 ವಿದ್ಯಾರ್ಥಿ ಗಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸದ್ಯ ರಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳು ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದ್ದು, ಚಿಕಿತ್ಸೆ ಸ್ಪಂದಿಸುತ್ತಿರುವ ಮಕ್ಕಳಿನ್ನು ವಾರ್ಡ್​ಗಳಿಗೆ ಶಿಫ್ಟ್ ಮಾಡಲಾಗಿದ್ದು, ಕೆಲವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ.

( ✍️ ಶಿವು ರಾಠೋಡ ರಾಯಚೂರು )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು