ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಶಿಬಿರಗಳು ಸಹಕಾರಿ: ಕಿರಣ್ ಕುಮಾರ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ ಯಾಗಿದೆ. ಆರೋಗ್ಯವೇ ಭಾಗ್ಯ, ಆರೋಗ್ಯವೇ ಸಂಪತ್ತು, ಆರೋಗ್ಯವೇ ನಿಮ್ಮ ಅಮೂಲ್ಯ ಆಸ್ತಿ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.

ಹಕ್ಕಿಪಿಕ್ಕಿ ಕ್ಯಾಂಪ್ (ಹಸೂಡಿ) ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಎಫ್ ಪಿಏ ಐ ಶಿವಮೊಗ್ಗ ಶಾಖೆ ಇವರ ಸಂಯುಕ್ತಾಶ್ರ ಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದೈಹಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿ ಆರೋಗ್ಯ. ಹಾಗೆ ಇದೇ ರೀತಿ ಇನ್ನು ಹೆಚ್ಚು ಹೆಚ್ಚು ಉಚಿತ ಆರೋಗ್ಯ ತಪಾಸಣೆಯ ಶಿಬಿರಗಳನ್ನು ಎಫ್ ಪಿ ಎ ಐ ಶಿವಮೊಗ್ಗ ಶಾಖೆ ಇವರೊಂದಿಗೆ ಇನ್ನು ಮುಂದೆಯೂ ಮಾಡಿಲಿದ್ದೇವೆ ಎಂದು ತಿಳಿಸಿದರು.

ಎಫ್ ಪಿ ಎ ಐ ನ ಸತೀಶ್ ಮಾತನಾಡಿ ಆರೋಗ್ಯ ತಪಾಸಣೆ ಶಿಬಿರ ಸದುಪಯೋಗ ಪಡಿಸಿಕೊಳ್ಳಿ ಮತ್ತು ರೋಟರಿ ಕ್ಲಬ್ ನೊಂದಿಗೆ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ರೋಟರಿ ಸಂಸ್ಥೆ ಪಲ್ಸ್ ಪೋಲಿಯೋ ನಿರ್ಮೂಲನೆಗೆ ಪ್ರಮುಖ ಕಾರಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಈಶ್ವರ್, ರವಿ ಕೋಟೊಜಿ, ರಮೇಶ್, ಧರ್ಮೇಂದ್ರ ಸಿಂಗ್, ಬಲರಾಮ್, ಸಂತೋಷ್, ರಾಜಶ್ರೀ ಬಸವರಾಜ್, ದೀಪ ಜಯಶೀಲ ಶೆಟ್ಟಿ ಹಾಗೂ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್ ಸೇರಿದಂತೆ ಇನ್ನಿತರರಿದ್ದರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ 
ಲೋಲ್ ಕಿ ಬಾಯಿ ಸೇರಿದಂತೆ ಶಿಬಿರದಲ್ಲಿ 200 ಕ್ಕೂ ಹೆಚ್ಚು ಜನ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು. 

ಕಾರ್ಯಕ್ರಮಕ್ಕೆ ಉಚಿತವಾಗಿ ಔಷಧ ನೀಡಿದ ಸಂಜಯ್ (ಫ್ರಾನ್ಕೊ ಇಂಡಿಯನ್ ಫಾರ್ಮ), ರೋಟರಿಯನ್ ಬಸವರಾಜ್ ಬಿ,ಎಫ್ ಪಿ ಎ ಐ ಸಿಬ್ಬಂದಿಗಳಾದ ಸತೀಶ್ ಮತ್ತು ತೇಜಸ್ವಿನಿ, ಸರಸ್ವತಿ ಹಾಗೂ ಆಶಾ ಕಾರ್ಯಕರ್ತೆ ಗೀತಾ ರವರಿಗೆ ಕೃತಜ್ಞತೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು