ವಿಜಯ ಸಂಘರ್ಷ
ಶಿವಮೊಗ್ಗ : ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಆನ್ಸ್ ಕ್ಲಬ್ ನಿಂದ ಅನನ್ಯ ಸ್ಕೂಲಿನಲ್ಲಿ ಹೆಣ್ಣು ಮಕ್ಕಳಿಗೆ ಪ್ರೌಢ ಹಂತದಲ್ಲಿ ಆಗುವ ದೈಹಿಕ ಬದಲಾವಣೆ ಮತ್ತು ಗುಡ್ ಟಚ್ ಬ್ಯಾಡ್ ಟಚ್ ಕಾರ್ಯಕ್ರಮವು ಹಮ್ಮಿ ಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಸೆಂಟ್ರಲ್ ನ ಅಧ್ಯಕ್ಷ ಕಿರಣ್ ಕುಮಾರ್ ಚಾಲನೆ ನೀಡಿದರು.
ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯರಾದ ಡಾ.ರಶ್ಮಿ ಅಂಚಿನಾಳು ಮಾತನಾಡಿ, ಮಕ್ಕಳ ಪ್ರೌಢ ಹಂತದಲ್ಲಾಗುವ ಹಾರ್ಮೋನ್ ಗಳ ಉತ್ಪತ್ತಿ, ಧ್ವನಿ ಬದಲಾವಣೆ, ಬ್ರೆಸ್ಟ್ ಡೆವಲಪ್ಮೆಂಟ್, ಗರ್ಭಕೋಶದ ಸಣ್ಣ ಪರಿಚಯ, ಋತುಮತಿ ಆಗುವುದು ಅಂದರೆ ಏನು ಮತ್ತು ಮಾನಸಿಕ ವಾಗಿ ಆಗುವ ಆತಂಕ ಹಿಂಜರಿಕೆ ಬಗ್ಗೆ ಹಾಗೂ ಆಹಾರ, ನಿದ್ರೆ, ಕ್ರೀಡೆ, ವ್ಯಾಯಾಮ, ಸ್ವಚ್ಛತೆ ಹಾಗೆಯೇ ಋತುಮತಿಯಾದ ನಂತರದಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ಕಿವಿಮಾತು ಹೇಳಿದರು.
ಆನ್ಸ್ ಅಧ್ಯಕ್ಷರಾದ ಗೀತಾ ಜಗದೀಶ್ ಮಾತನಾಡಿ, ಹೆಣ್ಣು ಮಕ್ಕಳು ಋತುಮತಿಯಾಗುವುದು ಸಹಜವಾದ ಕ್ರಿಯೆ. ಇದು ಪ್ರತಿಯೊಂದು ಹೆಣ್ಣು ಮಕ್ಕಳಲ್ಲಿಯೂ ಆಗುವ ದೈಹಿಕ ಕ್ರಿಯೆ. ಇದಕ್ಕೆ ಆತಂಕ ಹಿಂಜರಿಕೆ ಪಡಬಾರದು. ಋತುಮತಿಯಾಗುವ ಮೊದಲು ನೀವು ಎಲ್ಲಾ ಕೆಲಸ ಗಳಲ್ಲಿಯೂ ಹೇಗೆ ಚಟುವಟಿಕೆಯಿಂದ ಇರುತ್ತಿದ್ದಿರೋ ಅದೇ ರೀತಿ, ನಂತರವೂ ಆಟ ವಿದ್ಯಾಭ್ಯಾಸ ಮನೆ ಕೆಲಸ ಎಲ್ಲದರಲ್ಲಿಯೂ ಚಟುವಟಿಕೆ ಯಿಂದಿರಬೇಕು. ಅಲ್ಲದೆ ನಿಮ್ಮ ಸ್ನೇಹಿತೆ ಯರಿಗೂ ತಿಳಿಸಿ ಎಂದು ಮಕ್ಕಳನ್ನು ಕುರಿತು ಹೇಳಿದರು.
ಅನನ್ಯ ಶಾಲೆಯ ಮಕ್ಕಳು ಈ ಕಾರ್ಯಗಾರದ ಸದುಪಯೋಗ ಪಡೆದು ಕೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಫೌಂಡರ್ ಮತ್ತು ಪ್ರಾಂಶುಪಾಲ ಗಿರೀಶ್ ಹಾಗೂ ಶಿಕ್ಷಕರು, ಪಾಸ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೊಜಿ , ಧರ್ಮೇಂದ್ರ ಸಿಂಗ್, ಕೆ.ವಿ.ಗಣೇಶ್ ಹಾಗೂ ಜ್ಯೋತಿ ಶ್ರೀ ರಾಮ್, ನಯನ ಗಣೇಶ್ ಉಪಸಿತರಿದ್ದರು. ರಾಜಶ್ರೀ ಬಸವರಾಜ್ ವಂದಿಸಿದರು.
Tags:
ಶಿವಮೊಗ್ಗ ವರದಿ